ಕರಾವಳಿ

ಕುಂದ ಉತ್ಸವದಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಬಳಕೆ; ಆಯೋಜಕರ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

ಕುಂದಾಪುರ: ಕುಂದಾಪುರದ ಕೋಡಿ ಸಮುದ್ರ ತೀರದಲ್ಲಿ ಫೆ. 12ರಿಂದ 16ರ ವರೆಗೆ ನಡೆದ ಕುಂದ ಉತ್ಸವದಲ್ಲಿ ಅನುಮತಿ ಪಡೆದುದಕ್ಕಿಂತ ಹೆಚ್ಚಿನ ಅವಧಿಗೆ ಡಿಜೆ ಧ್ವನಿ ವರ್ಧಕ ಬಳಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆ. 12ರಿಂದ 16ರ ವರೆಗೆ ಧ್ವನಿವರ್ಧಕ ಬಳಸಲು ಷರತ್ತು ಬದ್ಧ ಪರವಾನಿಗೆ ನೀಡಲಾಗಿತ್ತು. ಆದರೆ ಫೆ. 16ರ ಸಂಜೆ 7ರಿಂದ ಫೆ. 17ರ ಮಧ್ಯರಾತ್ರಿ 12.50ರ ವರೆಗೂ ಡಿಜೆ ಧ್ವನಿ ವರ್ಧಕ ಬಳಿಸಿದ್ದು, ಇದಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ.

ಸಾರ್ವಜನಿಕ ಸ್ಥಳದಲ್ಲಿ ತಡರಾತ್ರಿಯವರೆಗೂ ಡಿಜೆ ಧ್ವನಿವರ್ಧಕ ಬಳಸಿ, ನಿಯಮ ಉಲ್ಲಂಘಿಸಿರುವುದಾಗಿ ಕುಂದ ಉತ್ಸವದ ಆಯೋಜಕರ ವಿರುದ್ದ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

Comments are closed.