ಕುಂದಾಪುರ: ‘ಪ್ಲಾಸ್ಟಿಕ್ ಮುಕ್ತ ಕೊಲ್ಲೂರು’ ಎಂಬ ಧ್ಯೆಯದೊಂದಿಗೆ ಮುಂದಿನ ತಿಂಗಳು ನಡೆಯಲಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ಜಾತ್ರಾ ಮಹೋತ್ಸವದ ಹಿನ್ನೆಲೆ ಕೊಲ್ಲೂರು ಪೊಲೀಸರು ಸಾರ್ವಜನಿಕರೊಡಗೂಡಿ ಶ್ರಮದಾನವನ್ನು ಮಾಡಿದರು.
ಕೊಲ್ಲೂರು ಮಾಸ್ತಿಕಟ್ಟೆ(ಸ್ವಾಗತ ಗೋಪುರ), ಶುಕ್ಲತೀರ್ಥ, ಬಸ್ ನಿಲ್ದಾಣದ ಎದುರುಗಡೆ, ಮೂಕಾಂಬಿಕಾ ಶಾಲೆ ಎದುರು ಮಾರ್ಗವಾಗಿ ಕಾಶಿ ತೀರ್ಥದವರೆಗೆ ಸ್ವಚತಾ ಅಭಿಯಾನ ನಡೆಯಿತು.
ಜೀಪ್, ರಿಕ್ಷಾ, ಟ್ಯಾಕ್ಸಿ, ಲಾಡ್ಜ್, ಹೋಟೆಲ್, ಮತ್ತು ಸಮಾನ ಮನಸ್ಕ ಸಾರ್ವಜನಿಕರು ಪ್ಲಾಸ್ಟಿಕ್ ಮುಕ್ತ ಕೊಲ್ಲೂರು ಅಭಿಯಾನಕ್ಕೆ ಜೊತೆಯಾದರು. ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ಹೋಟೆಲ್ ಮಹಾಲಕ್ಷ್ಮಿ ರವರು ಉಪಹಾರದ ವ್ಯವಸ್ತೆ ಮಾಡಿದ್ದರು.
ಕೊಲ್ಲೂರು ಠಾಣೆ ಉಪನಿರೀಕ್ಷಕರಾದ ವಿನಯ್ ಎಂ. ಕೊರ್ಲಹಳ್ಳಿ, ಸುಧಾರಾಣಿ, ಸಿಬ್ಬಂದಿಗಳಾದ ನಾಗೇಂದ್ರ, ಅಶ್ರಿತಾ, ರತ್ನಾಕರ್ ಮೊದಲಾದವರು ಪಾಲ್ಗೊಂದಿದ್ದರು.
Comments are closed.