ಪ್ರಮುಖ ವರದಿಗಳು

ಬಾಂಬ್ ಬೆದರಿಕೆ: ಮಾರ್ಗ ಬದಲಾಯಿಸಿದ ನವದೆಹಲಿ ವಿಮಾನ, ರೋಮ್‌ನಲ್ಲಿ ತುರ್ತು ಲ್ಯಾಂಡಿಂಗ್!

Pinterest LinkedIn Tumblr

ನವದೆಹಲಿ: ನ್ಯೂಯಾರ್ಕ್ ನ ಜಾನ್ ಎಫ್ ಕೆ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಹೊರಟ್ಟಿದ್ದ ಅಮೆರಿಕದ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಿದ್ದರಿಂದ ರೋಮ್ ನಲ್ಲಿ ಭಾನುವಾರ ಸಂಜೆ ತುರ್ತು ಭೂ ಸ್ಪರ್ಶ ಮಾಡಿದೆ.

280 ಪ್ರಯಾಣಿಕರಿದ್ದ ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನ ಕ್ಯಾಸ್ಪಿಯನ್ ಸಮುದ್ರದ ಮೇಲೆ ಪಶ್ಚಿಮಕ್ಕೆ ಹೋಗುವ ಮೊದಲು ಇಟಲಿಯ ಕಡೆಗೆ ತನ್ನ ಮಾರ್ಗವನ್ನು ತಿರುಗಿಸಿದೆ.

ನ್ಯೂಯಾರ್ಕ್ ನಿಂದ ಶನಿವಾರ ರಾತ್ರಿ 8-30ರ ಸಮಯದಲ್ಲಿ ಟೇಕ್ ಆಫ್ ಆದ ವಿಮಾನ ಭಾರತದ ರಾಜಧಾನಿಯತ್ತ ನಿಗದಿತ 14 ಗಂಟೆಗಳ ಪ್ರಯಾಣಕ್ಕಾಗಿ ಹೊರಟಿತು. ಆದಾಗ್ಯೂ, ಹಾರಾಟದ ಸುಮಾರು 10 ಗಂಟೆಗಳ ನಂತರ ವಿಮಾನವು ಕಪ್ಪು ಸಮುದ್ರದ ಬಳಿ ಹಠಾತ್ ಮಾರ್ಗವನ್ನು ಬದಲಾಯಿಸಿದ್ದು, ರೋಮ್‌ನ ಫಿಮಿಸಿನೊ ವಿಮಾನ ನಿಲ್ದಾಣದ ಕಡೆಗೆ ಹೊರಟಿದೆ.

ಇಟಾಲಿಯನ್ ವಾಯುಪ್ರದೇಶ ಸಮೀಪಿಸಿದ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಇಟಾಲಿಯನ್ ಯುದ್ದ ವಿಮಾನಗಳು ಬೆಂಗಾವಲು ಮಾಡಿದ್ದಾಗಿ ವರದಿಯಾಗಿದೆ. ಸಂಜೆ ಭಾನುವಾರ 5:30ರ ಸುಮಾರಿಗೆ ರೋಮ್‌ನಲ್ಲಿ ಸುರಕ್ಷಿತವಾಗಿ ಇಳಿದಿದೆ. ವಿಮಾನ ಹಾರಾಟದ ಮಧ್ಯದಲ್ಲಿ ಬಾಂಬ್ ಬೆದರಿಕೆಯನ್ನು ಸ್ವೀಕರಿಸಲಾಗಿದೆ ಎಂದು ಮೂಲಗಳು ಹೇಳಿವೆ.

Comments are closed.