ಗುಜರಾತ್: ಇಂದು ವಿಶ್ವ ವನ್ಯಜೀವಿ ದಿನವಾಗಿದ್ದು ತಮ್ಮ ತವರು ರಾಜ್ಯ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಜುನಾಗಡ್ನಲ್ಲಿರುವ ವನ್ಯಜೀವಿ ತಾಣ ಗಿರ್ಗೆ ಭೇಟಿ ನೀಡಿ, ಸಫಾರಿ ನಡೆಸಿದ್ದಾರೆ.
ಇದಕ್ಕೂ ಮುನ್ನ ವನ್ಯಪ್ರಾಣಿಗಳ ಸಂರಕ್ಷಣೆಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ವಿಶ್ವ ವನ್ಯಜೀವಿ ದಿನವಾದ ಇಂದು ನಮ್ಮ ಜೀವವೈವಿಧ್ಯತೆಯನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ನಾವು ಬದ್ದರಾಗಿರೋಣ. ಮುಂದಿನ ಪೀಳಿಗೆಗೂ ಅವರ ಭವಿಷ್ಯವನ್ನು ರಕ್ಷಿಸೋಣ” ಎಂದು ಮನವಿ ಮಾಡಿದ್ದಾರೆ.
ಭಾನುವಾರ ಸೋಮನಾಥದಿಂದ ಆಗಮಿಸಿರುವ ಮೋದಿ, ಸಸನ್‌ನಲ್ಲಿರುವ ರಾಜ್ಯ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುವ ಅರಣ್ಯ ಅತಿಥಿ ಗೃಹ ಸಿನ್ಹ್ ಸದನ್‌ನಲ್ಲಿ ರಾತ್ರಿ ತಂಗಿದ್ದರು. ಸಿನ್ಹ್ ಸದನ್‌ನಲ್ಲಿ ಅವರು ಲಯನ್ ಸಫಾರಿ ನಡೆಸಿದ್ದು, ಕೆಲವು ಸಚಿವರು ಮತ್ತು ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಸಾಥ್ ನೀಡಿದ್ದಾರೆ.
ಇದೇ ವೇಳೆ, ಸಸನ್ ಗಿರ್ನಲ್ಲಿ ಪ್ರಧಾನಿ ಮೋದಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ 7ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಎನ್‌ಬಿಡಬ್ಲ್ಯುಎಲ್‌ನಲ್ಲಿ ಸೇನಾ ಮುಖ್ಯಸ್ಥರು, ವಿವಿಧ ರಾಜ್ಯಗಳ ಸದಸ್ಯರು, ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎನ್‌ಜಿಒಗಳ ಪ್ರತಿನಿಧಿಗಳು, ಮುಖ್ಯ ವನ್ಯಜೀವಿ ವಾರ್ಡನ್‌ಗಳು ಮತ್ತು ವಿವಿಧ ರಾಜ್ಯಗಳ ಕಾರ್ಯದರ್ಶಿಗಳು ಸೇರಿದಂತೆ 47 ಸದಸ್ಯರನ್ನು ಮಂಡಳಿ ಹೊಂದಿದೆ.
Comments are closed.