ಕುಂದಾಪುರ: ಕುಂದಾಪುರದಲ್ಲಿ ಪ್ರಸಿದ್ಧವಾದ ಶನಿವಾರ ನಡೆಯುವ ಸಂತೆಗೆ ಬಂದ ಒಂದಷ್ಟು ಮಂದಿ ಗ್ರಾಹಕರ ಮೊಬೈಲ್ ಫೋನ್‌ಗಳನ್ನು ಕಳ್ಳರು ಎಗರಿಸಿದ ಘಟನೆ ಮಾ.29 ರಂದು ನಡೆದಿದೆ.
ಕುಂದಾಪುರದಲ್ಲಿ ಶನಿವಾರ ನಡೆಯುವ ಸಂತೆಗೆ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಬರುವುದು ವಾಡಿಕೆಯಾಗಿದೆ. ಶುಕ್ರವಾರ ರಾತ್ರಿಯಿಂದ ವರ್ತಕರು ಆಗಮಿಸುವುದರಿಂದ ಶನಿವಾರ ಮುಂಜಾನೆಯಿಂದಲೇ ಉಭಯ ಜಿಲ್ಲೆಗಳಿಂದ ಗ್ರಾಹಕರು ಬರುತ್ತಾರೆ. ಪ್ರಸ್ತುತ ಯುಗಾದಿ ಹಾಗೂ ರಂಜಾನ್ ಹಬ್ಬದ ಗೌಜಿಯಾದ ಕಾರಣ ಶನಿವಾರ ಸಂತೆಗೆ ಬರುವ ಜನರ ಸಂಖ್ಯೆಯೂ ಜಾಸ್ಥಿಯಾಗಿತ್ತು. ಮಧ್ಯಾಹ್ನದ ಸುಮಾರಿಗೆ ಒಂದಷ್ಟು ಮಂದಿ ಜೇಬು ಹಾಗೂ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಮೊಬೈಲ್‌ಗಳು ಕಳವಾಗಿತ್ತು. ಗಮನಕ್ಕೆ ಬರುತ್ತಿದ್ದಂತೆಯೇ ಕೆಲವರು ಪೊಲೀಸ್ ಠಾಣೆಗೆ ಆಗಮಿಸಿ ಮಾಹಿತಿ ನೀಡಿದ್ದಾರೆ. ಇನ್ನು ಕೆಲವರು ಏನು ಮಾಡಬೇಕೆಂದು ಸಂತೆಯಿಂದ ಗೊಂದಲದಲ್ಲಿಯೇ ಮನೆಯತ್ತ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಸರಣಿ ಮೊಬೈಲ್ ಕಳವಿನ ಬಗ್ಗೆ ಗಮನಕ್ಕೆ ಬರುತ್ತಲೆ ಪೊಲೀಸರು ಎಚ್ಚರಿಕೆ ವಹಿಸಿದ್ದು ಡಿವೈಎಸ್ಪಿ ಎಚ್.ಡಿ ಕುಲಕರ್ಣಿ, ಇನ್ಸ್‌ಪೆಕ್ಟರ್ ನಂಜಪ್ಪ ಹಾಗೂ ಪಿಎಸ್ಐ ನಂಜಾ ನಾಯ್ಕ್ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿದಿದೆ.
Comments are closed.