ಉಡುಪಿ: ಕಾರ್ಕಳ ತಾಲೂಕು ಕಾಬೆಟ್ಟು ನಿವಾಸಿ ಸುಧಾಕರ ಪೂಜಾರಿ (69) ಎಂಬ ವ್ಯಕ್ತಿಯು ಜನವರಿ 25 ರಂದು ಉತ್ತರಪ್ರದೇಶದಲ್ಲಿ ನಡೆಯುತ್ತಿದ್ದ ಕುಂಭಮೇಳದ ಪ್ರಯುಕ್ತ ಪ್ರಯಾಗ್ ರಾಜ್ ಮತ್ತು ಕಾಶಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋದವರು ಜ. 27 ರಿಂದ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಇದುವರೆಗೂ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ, ಇಂಗ್ಲೀಷ್, ತುಳು ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ನಗರ ಠಾಣೆ ದೂ.ಸಂಖ್ಯೆ: 08258-230213, 233100, ಮೊ.ನಂ: 9480805461 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
Comments are closed.