ಕರಾವಳಿ

ಕರಾವಳಿ‌ ಸಹಿತ ರಾಜ್ಯಾದ್ಯಂತ ಸೋಮವಾರ (ಮಾ.31) ಈದುಲ್‌ ಫಿತ್ರ್‌ ಆಚರಣೆ

Pinterest LinkedIn Tumblr

ಬೆಂಗಳೂರು: ರಾಜ್ಯಾದ್ಯಂತ ಸೋಮವಾರ(ಮಾ.31) ಈದ್ ಉಲ್ ಫಿತ್ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಮೌಲಾನಾ ಮನ್ಸೂದ್ ಇಮ್ರಾನ್ ತಿಳಿಸಿದ್ದಾರೆ.

(ಸಾಂದರ್ಭಿಕ ಚಿತ್ರ)

ರವಿವಾರ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಸ್‌ ಬೋರ್ಡ್ ಕಚೇರಿಯಲ್ಲಿ ಅಮೀರ್ ಎ ಶರೀಅತ್ ಮೌಲಾನಾ ಸಗೀ‌ರ್ ಅಹ್ಮದ್ ಖಾನ್ ರಶಾದಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಚಂದ್ರ ದರ್ಶನ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಕರಾವಳಿಯಲ್ಲೂ ನಾಳೆ ಆಚರಣೆ: ಶವ್ವಾಲ್‌ನ ಪ್ರಥಮ ಚಂದ್ರದರ್ಶನ ರವಿವಾರ ಮುಸ್ಸಂಜೆ ಕೇರಳದ ಕ್ಯಾಲಿಕಟ್‌ ನಲ್ಲಿ ಆಗಿರುವುದರಿಂದ ಕರಾವಳಿಯಲ್ಲಿ ಸೋಮವಾರ ಈದುಲ್ ಫಿತ್ರ್ ಆಚರಿಸಲು ದ.ಕ. ಉಡುಪಿ, ಉಳ್ಳಾಲ ಖಾಝಿಗಳು ಘೋಷಿಸಿದ್ದಾರೆ.

Comments are closed.