ಕರಾವಳಿ

ಬೈಂದೂರು | ಮನೆ ಬಾಗಿಲು ಮುರಿದು ಚಿನ್ನಾಭರಣ, ನಗದು, ಲ್ಯಾಪ್‌ಟಾಪ್ ಕಳವುಗೈದ ಮೂವರು ಆರೋಪಿಗಳ ಬಂಧನ

Pinterest LinkedIn Tumblr

ಕುಂದಾಪುರ: ಮನೆಮಂದಿ ಯಕ್ಷಗಾನಕ್ಕೆ ತೆರಳಿದ್ದ ವೇಳೆ ಬಾಗಿಲು ಮುರಿದು ಕೊಠಡಿಯ ಕಪಾಟಿನಲ್ಲಿರಿಸಿದ  ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣ, ನಗದು ಹಣ ಮತ್ತು ಲ್ಯಾಪ್‌ಟಾಪ್‌ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು‌ ಮಾ.30‌ ರಂದು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಬೈಂದೂರು ಮೂಲದವರಾದ ಮಹೇಶ್‌ ಯಳಜಿತ್, ಕಾರ್ತಿಕ್‌ ನಾಗೂರು, ಯತಿರಾಜ್‌ ಉಪ್ಪುಂದ ಬಂಧಿತ ಆರೋಪಿಗಳು. ಇವರು ಕಳವು ಮಾಡಿದ ಚಿನ್ನಾಭರಣ, ಲ್ಯಾಪ್‌ಟಾಪ್‌ ಮತ್ತು ಕೃತ್ಯಕ್ಕೆ ಬಳಸಿಕೊಂಡಿರುವ ಮೊಬೈಲ್‌ಗಳ‌ ಸಹಿತ ಅಂದಾಜು ಸುಮಾರು 3 ಲಕ್ಷ ಮೌಲ್ಯದ ಸೊತ್ತುಗಳನ್ನು  ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬೈಂದೂರು ತಾಲೂಕು ಉಪ್ಪುಂದ ಗ್ರಾಮದಲ್ಲಿ ಮಾ. 10 ರಂದು ಈ ಘಟನೆ ನಡೆದಿತ್ತು. ರಾತ್ರಿ ಮನೆಗೆ ಬೀಗ ಹಾಕಿ ಯಕ್ಷಗಾನ ಕಾರ್ಯಕ್ರಮಕ್ಕೆ ಹೋದ‌ ಮನೆಯವರು ವಾಪಾಸ್ಸಾದಾಗ ಕಳ್ಳತನ ಬೆಳೆಕಿಗೆ ಬಂದಿತ್ತು. ಈ ಬಗ್ಗೆ     ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ‌ಬೈಂದೂರು ವೃತ್ತ ನಿರೀಕ್ಷಕ ಸವಿತೃತೇಜ,   ಪಿಎಸ್‌ಐಗಳಾದ  ತಿಮ್ಮೇಶ್‌ ಬಿ.ಎನ್‌,   ನವೀನ ಪಿ. ಬೋರಕರ ಮತ್ತು ಸಿಬ್ಬಂದಿಗಳಾದ ಚಿದಾನಂದ, ಮಾಳಪ್ಪ , ಪರಯ್ಯ ಮಠಪತಿ,  ನವೀನ್‌, ವೃತ್ತ ನಿರೀಕ್ಷಕರ  ಕಛೇರಿಯ  ಸಿಬ್ಬಂದಿಗಳಾದ ರವೀಂದ್ರ, ಅಶೋಕ ರಾಥೋಡ್‌, ಶಂಕರ   ಮತ್ತು ಚಂದ್ರ ಅವರಿದ್ದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Comments are closed.