ಬೆಂಗಳೂರು: ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಿದ್ದು, ಏಪ್ರಿಲ್ 1 (ಇಂದಿನಿಂದ) ಸಾಕಷ್ಟು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಲಿದೆ.
ಮಂಗಳವಾರದಿಂದ ರಾಜ್ಯದ ಜನತೆಗೆ ದರ ಏರಿಕೆ ಬೀಸಿ ತಟ್ಟಲಿದ್ದು, ನಂದಿನಿ ಹಾಲು, ಮೊಸರು ಹಾಗೂ ವಿದ್ಯುತ್ ದರ ದುಬಾರಿಯಾಗಲಿದೆ. ಇದರ ಜೊತೆಗೆ ಬಿಬಿಎಂಪಿ ಕಸ ಸಂಗ್ರಹಕ್ಕೂ ತೆರಿಗೆ ಸಂಗ್ರಹಿಸಲು ನಿರ್ಧರಿಸಿದ್ದು, ನಾಳೆಯಿಂದಲೇ ಕಸಕ್ಕೂ ಸೆಸ್ ಕಟ್ಟಬೇಕಾಗಿದೆ. ಅಂತೆಯೇ ಈಗಾಗಲೇ ಬಸ್ ಹಾಗೂ ಮೆಟ್ರೋ ದರ ದುಬಾರಿಯಾಗಿರುವ ಬೆನ್ನಲ್ಲೇ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಇಂದಿನಿಂದ ಆರ್ಥಿಕ ವರ್ಷ ಪ್ರಾರಂಭವಾಗಲಿದ್ದು ಗ್ರಾಹಕರು ಹೆಚ್ಚಿನ ಹಣ ತೆರಬೇಕಾಗಿದೆ.
ವಿದ್ಯುತ್ ದರ ಏರಿಕೆ:
ಇಂಧನ ಇಲಾಖೆ ನೌಕರರ ಪಿಂಚಣಿ ಮತ್ತು ಗ್ರಾಜ್ಯೂಟಿ ನೀಡಲು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿದೆ. ಈ ನೂತನ ದರ ಏರಿಕೆ ನಾಳೆಯಿಂದ ಜಾರಿಗೆ ಬರಲಿದ್ದು, ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ವಿದ್ಯುತ್ ದರ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಇಂದು ಆದೇಶ ಹೊರಡಿಸಿದೆ. ಕೆಇಆರ್‌ಸಿ ಹೊರಡಿಸಿರುವ ಆದೇಶದ ಪ್ರಕಾರ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಿಸಲಾಗಿದೆ. ಈ ವಿದ್ಯುತ್ ದರ ಏರಿಕೆಯು ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.
ಹಾಲು ದರ:
ಮತ್ತೊಂದೆಡೆ ರೈತರಿಗೆ ಪ್ರೋತ್ಸಾಹ ಧನ ನೀಡಲು ಕೆಎಂಎಫ್ ನಂದಿನಿ ಹಾಲು, ಮೊಸರಿನ ಪ್ರತಿ ಲೀಟರ್ ದರದಲ್ಲಿ 4 ರೂ. ಹೆಚ್ಚಿಸಿದೆ. ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 4 ರೂಪಾಯಿ ಹೆಚ್ಚಿಸಿ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ನಂದಿನಿ ಹಾಲಿನ ದರ ಹೆಚ್ಚಿಸಿ ಇನ್ನೂ ವರ್ಷವಾಗಿಲ್ಲ. ಆಗಲೇ ದರ ಏರಿಕೆಗೆ ಪ್ರಸ್ತಾಪ ಬಂದಿತ್ತು. ಇದೀಗ ಸಂಪುಟ ಸಭೆಯಲ್ಲಿ ಈ ಕುರಿತು ದರ ಏರಿಕೆಗೆ ನಿರ್ಧಾರ ಕೈಗೊಂಡಿದೆ.
ಕಸ ಸಂಗ್ರಹಕ್ಕೂ ಸೆಸ್:
ಬೆಂಗಳೂರಿನಲ್ಲಿ ಕಸ ಸಂಗ್ರಹಕ್ಕೂ ಚೆಸ್ ಬೀಳಲಿದ್ದು, ಬಿಬಿಎಂಪಿ ಕಸ ಸಂಗ್ರಹಕ್ಕೂ ತೆರಿಗೆ ಸಂಗ್ರಹಿಸಲು ನಿರ್ಧರಿಸಿದೆ. 600 ಚದರಡಿಗೆ 10 ರೂ. 601 ರಿಂದ 1000 ರ ಚದರಡಿಗೆ 50 ರೂ., 1001 – 2000 ಚದರಡಿಗೆ 100 ರೂ. , 2001ರಿಂದ 3000 ಚದರಡಿಗೆ 150 ರೂ., 3001 ರಿಂದ 4000 ಚದರಡಿಗೆ 200 ರೂ. ಹಾಗೂ 4000 ಚದರಡಿ ಮೇಲ್ಪಟ್ಟ ಮನೆ ಅಥವಾ ಕಟ್ಟಡಗಳಿಗೆ 400 ರೂ. ಸೆಸ್ ವಿಧಿಸಲು ನಿರ್ಧರಿಸಲಾಗಿದೆ. ಅಂತೆಯೇ ವಾಣಿಜ್ಯ ಕಟ್ಟಡಕ್ಕೆ 500 ರೂ. ಹಾಗೂ 50 ಕೆಜಿ ವರೆಗೆ 7 ಸಾವಿರ ರೂ. ಹಾಗೂ ಪ್ರತಿನಿತ್ಯ 100 ಕೆಜಿವರೆಗೆ 14 ಸಾವಿರ ಚೆಸ್ ಪಾವತಿ ಮಾಡಬೇಕಾಗುತ್ತದೆ.
ಮುದ್ರಾಂಕ ಶುಲ್ಕ ಮತ್ತು ನೀರಿನ ದರ:
ಮುದ್ರಾಂಕ ಶುಲ್ಕವು 50 ರೂ. ನಿಂದ 500 ರೂ.ಗಳವರೆಗೆ ಹೆಚ್ಚಳವಾಗಲಿದೆ. ಅಫಿಡೆವಿಟ್ ಶುಲ್ಕ 20 ರೂ.ನಿಂದ 100 ರೂ.ರವರೆಗೆ ಏರಿಕೆಯಾಗಲಿದೆ. ಇದೇ ವೇಳೆ ನೀರಿನ ದರವೂ 1 ಪೈಸೆ ಏರಿಕೆಯಾಗಿದೆ.
ಹೊಟೆಲ್ ತಿಂಡಿತಿನಿಸುಗಳ ದರ ಏರಿಕೆ:
ಇದೇ ವೇಳೆ ಹಾಲು ದರ ಹೆಚ್ಚಳವಾಗಿರುವುದರಿಂದ ಹೋಟೆಲ್ ಗಳಲ್ಲಿ ಕಾಫಿ, ಟೀ ದರವೂ ಗಗನಕ್ಕೇರಲಿದೆ. ವಿದ್ಯುತ್ ದರ 31 ಪೈಸೆ ಹೆಚ್ಚಳ ಮಾಡಿರುವುದರಿಂದ ಮಾಸಿಕ ಶುಲ್ಕ 20 ರೂ. ಹೆಚ್ಚಳವಾಗಲಿದ್ದು, ಇದರಿಂದಾಗಿ 120 ರೂ. ಇದ್ದ ನಿಗದಿತ ಶುಲ್ಕ 140 ರೂ.ಗಳಿಗೆ ಹೆಚ್ಚಳವಾಗಲಿದೆ.
ಹೊಸ ವಾಹನ ಖರೀದಿದಾರರಿಗೂ ಶಾಕ್:
ಹೊಸವಾಹನ ಖರೀದಿಸುವ ಗ್ರಾಹಕರಿಗೆ ಶಾಕ್ ನೀಡಿದ್ದು, ಉಕ್ಕು ಬಿಡಿ ಭಾಗ ದುಬಾರಿ ಇದರ ಜೊತೆಗೆ ಬಿಡಿ ಭಾಗ ಉಕ್ಕುಗಳ ಆಮದು ದರ ನಾಳೆಯಿಂದಲೇ ಏರಿಕೆಯಾಗುತ್ತದೆ. ಇದರಿಂದಾಗಿ ವಾಹನಗಳ ಬೆಲೆಯೂ ಗಗನಕ್ಕೇರಿದೆ ಎನ್ನಲಾಗಿದೆ.
Comments are closed.