ಕರಾವಳಿ

ಎಂಡೋಸಲ್ಫಾನ್ ಬಾಧಿತ ಕುಟುಂಬದ ಜೊತೆ ವಿಶಿಷ್ಟವಾಗಿ ರಂಝಾನ್ ಹಬ್ಬ ಆಚರಿಸಿದ ಚಿತ್ತೂರು ಮುಸ್ಲಿಂ ಬಾಂಧವರು!

Pinterest LinkedIn Tumblr

ಕುಂದಾಪುರ: ತಾಲೂಕಿನ ಚಿತ್ತೂರು ಮುಸ್ಲಿಂ ಬಾಂಧವರು, ಹಬ್ಬದ ಪ್ರಾರ್ಥನೆ ಮುಗಿಸಿದ ಬಳಿಕ ಎಂಡೋ ಸಲ್ಫಾನ್ ಬಾಧಿತ ಕುಟುಂಬದ‌ ನಿವಾಸಕ್ಕೆ ತೆರಳಿ ರಂಜಾನ್ ಕಿಟ್ ,  ಹಣ್ಣು-ಹಂಪಲು, ಪಾನಿಯ ನೀಡಿ ಅವರೊಂದಿಗೆ ರಂಝಾನ್ ಹಬ್ಬವನ್ನು ಆಚರಿಸಿಕೊಂಡು ವಿಶೇಷತೆ ತೋರಿದ್ದಾರೆ.

ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಹೊಯ್ಯಾಣ ಎಂಬಲ್ಲಿ ಸುಮಾರು 20 ವರ್ಷಗಳಿಂದ ಎಂಡೋ ಸಲ್ಫಾನ್ ಪೀಡಿತರಾಗಿ ಹೊರ ಜಗತ್ತನ್ನೇ ಕಾಣದೆ ಮನೆಯೊಳಗಿದ್ದ  ಅಣ್ಣ-ತಂಗಿಯರ ಬದುಕಿನ ನೋವಿನ ಕಥೆಯನ್ನು ಕೇಳಿ ತಿಳಿದ ಮುಸ್ಲೀಂ ಬಾಂಧವರು ಈ ಬಾರಿ ರಂಝಾನ್‌ನ್ನು ಅವರೊಂದಿಗೆ ಆಚರಿಸಿಕೊಂಡರು.

ಅಬ್ದುಲ್ ಸಲಾಂ ಚಿತ್ತೂರು ಮತ್ತವರ ತಂಡದ ಜೊತೆ ಮಾತನಾಡಿದ ಅವರ ತಾಯಿ,  ಗ್ರಾ.ಪಂ ವತಿಯಿಂದ ಕುಡಿಯುವ ನೀರಿಗಾಗಿ ಬಾವಿ ಒದಗಿಸಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವದಿಂದಾಗಿ ಎರಡು ಮಕ್ಕಳನ್ನು ಆರೈಕೆ ಮಾಡುವುದರಲ್ಲಿ ಬಹಳಷ್ಟು ಕಷ್ಟವಾಗುತ್ತದೆ. ತುಂಬಾ ದೂರ ಹೋಗಿ ನೀರು ತರಬೇಕಾದ ಅನಿವಾರ್ಯತೆ ಬಗ್ಗೆ ಅಳಲನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ತಂಡದಲ್ಲಿದ್ದ ಅಬ್ದುಲ್ ರೆಹಮಾನ್ , ಜಯರಾಮ, ಮಹಮ್ಮದ್, ಇಕ್ಬಾಲ್, ರಿಯಾಝ್, ಸುಲೇಮಾನ್, ಇರ್ಷಾದ್, ಶರ್ಫಾನ್ ತಂಡ ಒಟ್ಟಾಗಿ ನೀರಿನ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು.

Comments are closed.