ಕುಂದಾಪುರ: ನಕಲಿ ಮದ್ಯ ಮಾರಾಟದ ಆರೋಪ ಎದುರಿಸುತ್ತಿದ್ದ ಜಯಪ್ರಕಾಶ್ ಹಾಗೂ ರತ್ನಾಕರ ಖಾರ್ವಿ ಎಂಬವರಿಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಶ್ರುತಿಶ್ರೀ ತಲಾ 6 ತಿಂಗಳ ಕಾರಾಗೃಹ ವಾಸ ಹಾಗೂ ತಲಾ 8 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಅಬಕಾರಿ ಉಪನಿರೀಕ್ಷಕ ನಿತ್ಯಾನಂದ 2017ರಲ್ಲಿ ನಕಲಿ ಮದ್ಯ ಸಾಗಾಟ ಪ್ರಕರಣ ಪತ್ತೆ ಹಚ್ಚಿದ್ದರು. ಅಂದಿನ ಕುಂದಾಪುರ ಉಪವಿಭಾಗ ಉಪಅಬಕಾರಿ ನಿರೀಕ್ಷಕ ಅರವಿಂದ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಉಮಾ ದಾಮೋದರ ನಾಯ್ಕ ವಾದ ಮಂಡಿಸಿದ್ದರು.
Comments are closed.