ಕರಾವಳಿ

ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ ಮೊಗವೀರರವರಿಗೆ ರಾಷ್ಟ್ರೀಯ ಮಟ್ಟದ  ಸರ್ದಾರ್ ಪಟೇಲ್ ಯುನಿಟಿ ಪ್ರಶಸ್ತಿ ಪ್ರದಾನ

Pinterest LinkedIn Tumblr

ಕುಂದಾಪುರ: ಗೋವಾದಲ್ಲಿ ಇತ್ತಿಚೆಗೆ ನಡೆದ ಪ್ರತಿಷ್ಠಿತ ಟೊಪ್ನೆಟೆಕ್ ಪೌಂಡೇಶನ್ ನವರು ಕೊಡಮಾಡುವ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸರ್ದಾರ್ ಪಟೇಲ್ ಯುನಿಟಿ ಅವಾರ್ಡ್ಸ್ 2025-“ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿತ್ವ” ಪ್ರಶಸ್ತಿಯನ್ನು ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರರಿಗೆ ಪ್ರದಾನ ಮಾಡಲಾಯಿತು.

ಗಣೇಶ್ ಮೊಗವೀರ ಅವರು ಇದುವರೆಗೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಶಿವಪ್ರತಾಪ್ ಶುಕ್ಲ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಖ್ಯಾತ ಸಿನಿಮಾ ನಟಿ ಹಾಗೂ  ಲೋಕಸಭಾ ಸದಸ್ಯೆ ಶ್ರೀಮತಿ ಹೇಮಾಮಾಲಿನಿ ಹಾಗೂ ಹಲವಾರು ಗೌರವಾನ್ವಿತ ಅತಿಥಿಗಳು ಉಪಸ್ಥಿತರಿದ್ದರು.

Comments are closed.