ಕರಾವಳಿ

ಕುಂದಾಪುರ ತಾಲೂಕು ಆಫೀಸ್‌ಗೆ ಲೋಕಾಯುಕ್ತ ಪೊಲೀಸರ ದಿಡೀರ್ ಭೇಟಿ, ಪರಿಶೀಲನೆ

Pinterest LinkedIn Tumblr

ಕುಂದಾಪುರ: ಇಲ್ಲಿನ ಪ್ರಜಾಸೌಧದಲ್ಲಿರುವ ತಾಲೂಕು ಕಚೇರಿಗೆ ಲೋಕಾಯುಕ್ತ ಪೊಲೀಸರು ಬುಧವಾರದಂದು ದಿಢೀರ್ ಭೇಟಿ ನೀಡಿ ಕೆಲವೊಂದು ವಿಚಾರಗಳ ಬಗ್ಗೆ ಪರಿಶೀಲಿಸಿದರು ಎಂದು ತಿಳಿದುಬಂದಿದೆ.

ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ,‌ ಜನರ ಕೆಲಸ ವಿಳಂಭ ಮೊದಲಾದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಉಡುಪಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ರಾಜೇಂದ್ರ ನಾಯ್ಕ್ ಎಂ.ಎನ್. ನೇತೃತ್ವದಲ್ಲಿ ಸಿಬ್ಬಂದಿಗಳಾದ ರವೀಂದ್ರ ಗಾಣಿಗ, ರಮೇಶ್, ರಾಘವೇಂದ್ರ, ಸೂರಜ್, ಮಲ್ಲಿಕಾ, ಪುಷ್ಪವತಿ ಮೊದಲಾದವರಿದ್ದರು.

Comments are closed.