ಕರಾವಳಿ

ನಾಡ | ‘ಕೊರಗ ಮಹಿಳೆಯರ ಪಾರಂಪರಿಕ ಕರಕುಶಲ ಮತ್ತು ವಿನ್ಯಾಸ ತರಬೇತಿ’ ಉದ್ಘಾಟನೆ ಕಾರ್ಯಕ್ರಮ

Pinterest LinkedIn Tumblr

ಬೈಂದೂರು: ಕೊರಗ ಸಮುದಾಯದ ಅಸ್ಮಿತೆಯ ಬಹು ಮುಖ್ಯ ಅಂಗವಾಗಿರುವ ಕುಲಕಸುಬು, ಆ ಕಸುಬನ್ನು ಅವಲಂಬಿತ ಕುಟುಂಬದ ಸದಸ್ಯರ ಆತ್ಮ ಗೌರವವನ್ನು ಹೆಚ್ಚಿಸುವ ಜೊತೆಗೆ ಕುಲಕಸುಬಿನ ಉತ್ಪನ್ನಗಳಿಗೆ ಸಮರ್ಪಕ ಮೌಲ್ಯ ಪಡೆದುಕೊಳ್ಳುವುದು ಸಾಧ್ಯವಾಗಿಸುವ ನಿಟ್ಟಿನಲ್ಲಿ ಮತ್ತು ಕರ ಕೌಶಲ್ಯಕ್ಕೆ ಕಾಲಘಟ್ಟಕ್ಕೆ ಅನುಗುಣವಾಗಿ ನವೀನ ವಿನ್ಯಾಸಗಳನ್ನು ಜೋಡಿಸಿಕೊಂಡು ಮಾರುಕಟ್ಟೆಯ ಬೇಡಿಕೆ ಆಧರಿಸಿ ಉತ್ಪನ್ನಗಳನ್ನು ತಯಾರಿಗೊಳಿಸುವ ಘನ ಉದ್ದೇಶದಿಂದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮುಂದಾಳತ್ವದಲ್ಲಿ, ಆ್ಯಕ್ಷನ್ ಎಯ್ಡ್ ಅಸೋಸಿಯೇಷನ್ ಬೆಂಗಳೂರು ಇವರ ಸಹಯೋಗದಲ್ಲಿ, ವೆಕ್ಟರ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕುಂದಾಪುರದ ನಾಡದಲ್ಲಿ ನಡೆಯಲಿರುವ 2 ತಿಂಗಳ ಅವಧಿಯ ‘ಕೊರಗ ಮಹಿಳೆಯರ ಪಾರಂಪರಿಕ ಕರಕುಶಲ ಮತ್ತು ವಿನ್ಯಾಸ ತರಬೇತಿ’ ಉದ್ಘಾಟನೆ ಕಾರ್ಯಕ್ರಮ ನಾಡ ಕೊರಗ ಸಮುದಾಯ ಭವನದಲ್ಲಿ ನಡೆಯಿತು.

ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಕೊರಗ ಸಮುದಾಯದ ಡೋಲು ವಾದನದ ಮೂಲಕ ಕಾರ್ಯಗಾರವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸಮುದಾಯದ ಕಲೆ-ಕೌಶಲ್ಯಗಳಿಗೆ ಪೂರಕವಾಗಿ ತನ್ನ ಸಂಪೂರ್ಣ ಸಹಕಾರದ ಭರವಸೆ ನೀಡಿ ಕುಲಕಸುಬಿನ ಉತ್ಪನ್ನಗಳ ವ್ಯವಸ್ಥಿತ ಮಾರುಕಟ್ಟೆಗೆ ಕೊಲ್ಲೂರು ದೇವಸ್ಥಾನದ ಬಳಿ ಶಾಶ್ವತ ಅಂಗಡಿ ಕೋಣೆ ವ್ಯವಸ್ಥೆ ಮಾಡಿಕೊಡುವುದಾಗಿ ಘೋಷಿಸಿದರು.

Comments are closed.