ಅಂತರಾಷ್ಟ್ರೀಯ

ಹೈ ಸ್ಪೀಡ್‍ನಲ್ಲಿ ಗಾಡಿಯನ್ನು ರಿವರ್ಸ್ ಆಗಿ ಓಡಿಸಿದರೆ ಹೇಗಿರುತ್ತೆ ? ಈ ವೀಡಿಯೊ ಒಮ್ಮೆ ನೋಡಿ….

Pinterest LinkedIn Tumblr

https://youtu.be/lsbUMeHJJwU

ಬೀಜಿಂಗ್: ರಸ್ತೆ ಮೇಲೆ ಅತಿ ವೇಗದಲ್ಲಿ ಸಾಹಸ ಮಾಡುವುದೇ ಅತ್ಯಂತ ಅಪಾಯಕಾರಿ ಅಂತಹದ್ರಲ್ಲಿ ಹೈ ಸ್ಪೀಡ್‍ನಲ್ಲಿ ಗಾಡಿಯನ್ನ ರಿವರ್ಸ್ ಆಗಿ ಓಡಿಸಿದ್ರೆ ಹೇಗಿರುತ್ತೆ ಹೇಳಿ.

ಹೌದು. ಚೀನಾದ ಬೀಜಿಂಗ್ ಹೆದ್ದಾರಿಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಕಾರು ಚಾಲಕನೊಬ್ಬ ಅತಿ ವೇಗದಲ್ಲಿ ವಾಹನಗಳು ಚಲಿಸುವ ರಸ್ತೆಯಲ್ಲಿ ಹಿಮ್ಮುಖವಾಗಿ ಗಾಡಿ ಚಲಾಯಿಸಿ ಭಯಾನಕ ಸಾಹಸ ಮಾಡಿದ್ದಾನೆ. ಹೈ ಸ್ಪೀಡ್‍ನಲ್ಲಿ ವಾಹನಗಳು ಚಲಿಸುತ್ತಿದ್ದರೆ, ಅದಕ್ಕಿಂತಲೂ ವೇಗದಲ್ಲಿ ಆತ ರಿವರ್ಸ್ ನಲ್ಲಿ ಗಾಡಿ ಓಡಿಸಿದ್ದಾನೆ.

ರಸ್ತೆ ಮೇಲೆ ಬೇರೆ ವಾಹನಗಳು ಚಲಿಸುತ್ತಿದ್ದರು, ಅವುಗಳನ್ನ ಹಿಂದಿಕ್ಕಿ, ತಿರುವುಗಳಿರುವ ರಸ್ತೆಯಲ್ಲಿ ಚಾಣಕ್ಷತನದಿಂದ ಗಾಡಿ ಓಡಿಸಿದ್ದಾನೆ. ಈತ ಹೀಗೆ ಹಿಂದಕ್ಕೆ ಗಾಡಿ ಓಡಿಸುತ್ತಿರುವ ದೃಶ್ಯಗಳು ಅದರ ಎದುರಿನಲ್ಲಿ ಸಾಗುತ್ತಿದ್ದ ಕಾರಿನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Comments are closed.