ಮುಂಬೈ: ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಚಿತ್ರ ನಾಳೆ ತೆರೆಗೆ ಬರ್ತಿದೆ. ಸಲ್ಮಾನ್ ಚಿತ್ರದಲ್ಲಿ ಕುಸ್ತಿಪಟುವಾಗಿ ಸಿಕ್ಕಾಪಟ್ಟೆ ಫೈಟಿಂಗ್ ಮಾಡಿದ್ದಾರೆ. ಆದ್ರೆ ಇದೀಗ ಸಲ್ಮಾನ್ ತಂಗಿ ಅರ್ಪಿತಾ ಪುತ್ರ ಆಹಿಲ್ ಮಾವನ ಜೊತೆಗೆ ಸಖತ್ ಫೈಟ್ ಮಾಡಿದ್ದಾನೆ.
ಹೌದು. ಸಲ್ಮಾನ್ ಹಾಗೂ ಆಹಿಲ್ ಕೂಲ್ ಕುಸ್ತಿ ಇದೀಗ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡ್ತಿದೆ. ಸಲ್ಮಾನ್ ಬಾಕ್ಸಿಂಗ್ ಲುಕ್‍ನಲ್ಲಿ ಆಹಿಲ್ ಜೊತೆಗೆ ಫೈಟಿಂಗ್‍ಗೆ ಮುಂದಾದ್ರೆ, ಇತ್ತ ಆಹಿಲ್ ತನ್ನ ಪುಟ್ಟ ಪುಟ್ಟ ಕೈಯನ್ನೇ ಮಡಚಿಕೊಂಡು ಮಾವನ ಜೊತೆ ಕೈ ಕೈ ಮಿಲಾಯಿಸಿದ್ದಾನೆ. ಸಲ್ಮಾನ್ ಆಹಿಲ್ ಜೊತೆಗೆ ಮಸ್ತಿ ಮಾಡಿದ್ದು, ಮೈ ಹೂ ಹೀರೋ ಹಾಡು ಹಾಗೂ ಸುಲ್ತಾನ್ ಚಿತ್ರದ ಟೈಟಲ್ ಸಾಂಗ್ ಹಾಡಿಕೊಂಡು ಆಹಿಲ್‍ನನ್ನು ನಗಿಸಿದ್ದಾರೆ.
ಅರ್ಪಿತಾ ಕೈಯಲ್ಲಿದ್ದ ಆಹಿಲ್ ತಾನು ಕೂಡ ಫೈಟ್‍ಗೆ ಸಿದ್ಧ ಅನ್ನೋತರ ಫೋಸ್ ಕೊಟ್ಟಿರೋದು ಸಖತ್ ಕ್ಯೂಟ್ ಎನಿಸಿದೆ. ಇನ್‍ಸ್ಟಾಗ್ರಾಮ್‍ನಲ್ಲಿ ಅರ್ಪಿತಾ ಈ ವಿಡಿಯೋವನ್ನ ಶೇರ್ ಮಾಡಿದ್ದು, ಬಿಗ್ ಸುಲ್ತಾನ್ ಜೊತೆಗಿನ ಮಿನಿ ಸುಲ್ತಾನ್ ಫೈಟ್ ವೈರಲ್ ಆಗಿದೆ.
Comments are closed.