ಪ್ರಮುಖ ವರದಿಗಳು

ಕಟ್ಟಡದ ಮೇಲಿಂದ ನಾಯಿ ಮರಿಯನ್ನು ಕೆಳಗೆಸೆದ ವೈದ್ಯ ವಿದ್ಯಾರ್ಥಿ ವೀಡಿಯೊ ವೈರಲ್

Pinterest LinkedIn Tumblr

https://youtu.be/TbwRUtM8CAg

ಚೆನ್ನೈ: ಯುವಕನೊರ್ವ ನಾಯಿ ಮರಿಯೊಂದನ್ನು ಕಟ್ಟಡದ ಮಹಡಿಯ ಮೇಲಿಂದ ಕೆಳೆಗೆಸೆಯುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನಾಯಿ ಮರಿಯನ್ನು ಕೆಳಗೆಸೆದ ಯುವಕನನ್ನು ಮಾಧಾ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿ ಗೌತಮ್ ಸುದರ್ಶನ್ ಎಂದು ಗುರುತಿಸಲಾಗಿದ್ದು. ಆತನ ಕಾಲೇಜಿನ ಸಹಪಾಠಿಗಳೇ ನ್ಯೂಸ್ ಮಿನಿಟ್ ಗೆ ಘಟನೆಯ ವಿವರಗಳನ್ನು ಕಳುಹಿಸಿ ಕೃತ್ಯ ನಡೆಸಿದವನ ಹೆಸರು ಹಾಗೂ ವಿವರಗಳನ್ನು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೃತ್ಯ ಎಸೆಗಿದ ಗೌತಮ್ ಹಾಗೂ ಆತನಿಗೆ ಸಹಾಯ ಮಾಡಿದ ಆಶೀಶ್ ಪೌಲ್ ನನ್ನು ಸೆರೆ ಹಿಡಿಯಲು ಪೊಲೀಸರು ಹಾಗೂ ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಹೋಗಿದ್ದಾಗ ಅವರಿಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಈ ಅಮಾನುಷ ಕೃತ್ಯದ ವಿಡಿಯೋವನ್ನು ನೋಡಿದ ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್ ಹಾಗೂ ಚೆನ್ನೈನ ಸೈಬರ್ ಕ್ರೈಂ ಸೆಲ್ ನವರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.