https://youtu.be/3Zm1b8VQ7EQ
ನವದೆಹಲಿ: ಈಗ ಕಾಲ ಬದಲಾಗಿದೆ, ಪ್ರೇಮಿಗಳ ಹಾವಾಳಿ ಪಾರ್ಕ್‍ನಲ್ಲಿ ಮಾತ್ರವಲ್ಲ ಇದೀಗ ಜನ ಓಡಾಡೋ ರಸ್ತೆ ಮೇಲೆ ಶುರುವಾಗಿದೆ. ಅದೇ ರೀತಿ ದೆಹಲಿಯಲ್ಲಿ ಇದೀಗ ಪ್ರೇಮಿಗಳಿಬ್ಬರು ಯಾವುದೇ ಭಯವಿಲ್ಲದೇ ಟ್ರಾಫಿಕ್ ಸಿಗ್ನಲ್‍ನಲ್ಲೇ ಕಿಸ್ಸಿಂಗ್ ಮಾಡಿದ್ದು ಈ ವಿಡಿಯೋ ಈಗ ವೈರಲ್ ಆಗಿದೆ.
ಹೌದು, ನಿಜಕ್ಕೂ ಆಶ್ಚರ್ಯ. ವಿದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ರೋಮ್ಯಾನ್ಸ್ ಮಾಡೋದು ಕಾಮನ್. ಆದ್ರೆ ಈ ಆಚರಣೆ ರಾಷ್ಟ್ರ ರಾಜಧಾನಿಯಲ್ಲೂ ಕಂಡುಬಂದಿದ್ದು, ದೆಹಲಿಯ ಟ್ರಾಫಿಕ್ ಸಿಗ್ನಲ್‍ವೊಂದರಲ್ಲಿ ಪ್ರೇಮಿಗಳಿಬ್ಬರು ಮುತ್ತಿಕ್ಕಿದ್ದು, ಈ ವಿಡಿಯೋವನ್ನ ಪ್ರತ್ಯಕ್ಷದರ್ಶಿಯೊಬ್ಬರು ಸೆರೆಹಿಡಿದಿದ್ದಾರೆ.
ಬೈಕ್‍ನಲ್ಲಿದ್ದ ಪ್ರೇಮಿಗಳು ಅಕ್ಕಪಕ್ಕದಲ್ಲಿ ವಾಹನಗಳಿದ್ದರೂ, ಜನರೂ ಓಡಾಡುತ್ತಿದ್ದರೂ ಒಂಚೂರು ಅಂಜದೇ ಮುತ್ತಿಟ್ಟಿದ್ದಾರೆ. ಯುವಕ ಬೈಕ್‍ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನ ಕೂರಿಸಿಕೊಂಡು ಮುತ್ತಿಟ್ಟಿದ್ದಾನೆ. ಇತ್ತ ಯುವತಿಯೂ ಆತನಿಗೆ ಸಹಕರಿಸಿದ್ದಾಳೆ. ಈ ವೇಳೆ ಬಾಲಕನೊಬ್ಬ ಏನೋ ವಸ್ತುವನ್ನ ಮಾರುತ್ತ ಬಂದ್ರೂ ಯುವ ಪ್ರೇಮಿಗಳ ಸರಸ ಸಲ್ಲಾಪ ನಿಂತಿರಲಿಲ್ಲ. ಒಟ್ಟಿನಲ್ಲಿ ಈ ವಿಡಿಯೋದಿಂದ ಜನರೀಗ ದೆಹಲಿಯೇ ಬದಲಾಗಿದೆ ಎಂಬ ನಿಲುವಿಗೆ ಬಂದಿದ್ದಾರೆ.
Comments are closed.