ಅಂತರಾಷ್ಟ್ರೀಯ

17 ಗ್ಲಾಸ್‍ಗಳಿಗೆ ಒಂದೇ ಬಾರಿ ಕಾಕ್‍ಟೇಲ್ ಸುರಿದು ಎಲ್ಲರನ್ನು ಬೆರಗಾಗುವಂತೆ ಮಾಡಿದ ಬಾರ್ ಸಿಬ್ಬಂದಿ !

Pinterest LinkedIn Tumblr

ಬರ್ಲಿನ್: ಬಾರ್‍ಟೆಂಡರ್‍ಗಳು ಕಾಕ್‍ಟೇಲ್ ಅಥವಾ ಮಾಕ್‍ಟೇಲ್‍ಗಳನ್ನ ಸರ್ವ್ ಮಾಡುವಾಗ ಬಾಟಲಿಯನ್ನ ಕುಲುಕುತ್ತಾ ಕೈಚಳಕ ತೋರುವುದನ್ನ ನೋಡಿರ್ತೀರ. ಇಲ್ಲೊಬ್ಬ ಬಾರ್‍ಟೆಂಡರ್ ಒಂದೇ ಸಲಕ್ಕೆ 17 ಗ್ಲಾಸ್‍ಗಳಿಗೆ ಕಾಕ್‍ಟೇಲ್ ಸುರಿದು ಅಚ್ಚರಿ ಮೂಡಿಸಿದ್ದಾರೆ.

ಜರ್ಮನಿಯ ಬಾರ್‍ಟೆಂಡರ್ ಫಿಲಿಪ್ ಟ್ರೇಬರ್‍ನ ಈ ಕೌಶಲ್ಯವನ್ನ ಕಂಡು ನೋಡುಗರು ಹಾಗೂ ಇತರೆ ಬಾರ್‍ಗಳ ಸಿಬ್ಬಂದಿಯೂ ಬೆರಗಾಗಿದ್ದಾರೆ.

ಮೊದಲಿಗೆ ಫಿಲಿಪ್ ಗಾಜಿನ ಗ್ಲಾಸ್‍ಗಳನ್ನ ಒಂದರ ಮೇಲೊಂದು ಜೋಡಿಸಿಕೊಂಡು ಅದಕ್ಕೆ ಜ್ಯಾಗರಿಟಾ ಕಾಕ್‍ಟೇಲ್ ಸುರಿದುಕೊಳ್ತಾರೆ. ಟೇಬಲ್ ಮೇಲೆ 17 ಗ್ಲಾಸ್‍ಗಳನ್ನ ಜೋಡಿಸಿ, ಎರಡು ಗ್ಲಾಸ್‍ಗಳ ನಡುವೆ ಒಂದೊಂದು ಪುಟ್ಟದಾದ ಶಾಟ್ಸ್ ಗ್ಲಾಸ್ ಇಟ್ಟಿರುತ್ತಾರೆ. ನಂತರ ಕೈಯಲ್ಲಿರುವ ಗ್ಲಾಸ್‍ಗಳಿಂದ ಒಂದೇ ಸಲಕ್ಕೆ 17 ಗ್ಲಾಸ್‍ಗಳಿಗೂ ಕಾಕ್‍ಟೇಲ್ ಸುರಿಯುತ್ತಾರೆ.

ಫಿಲಿಪ್ಸ್ ಈ ಮೊದಲು ಇದೇ ರೀತಿ 14 ಗ್ಲಾಸ್‍ಗಳಿಗೆ ಕಾಕ್‍ಟೇಲ್ ಸುರಿದು ವಿಶ್ವದಾಖಲೆ ನಿರ್ಮಿಸಿದ್ದಾರೆ.

Comments are closed.