https://youtu.be/Eh9WVAuoj7U
ಜೋನ್‍ಪುರ್ (ಉ.ಪ್ರ.), ಜು.31 : ಉತ್ತರ ಪ್ರದೇಶದ ಜೋನ್‍ಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯೋರ್ವಳು ಬೇವಿನ ಮರದ ಕೊಂಬೆಯ ಮೇಲೆ ನಮಾಜ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೇವಿನ ಮರವೊಂದರ ತೆಳುವಾದ ರೆಂಬೆಯೊಂದರ ಮೇಲೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುವ ಈ ನಿಗೂಢ ಮಹಿಳೆ ನಮಾಜ್ ಮಾಡಿ ನಂತರ ಹಾಗೆಯೇ ಕಣ್ಮರೆಯಾಗುತ್ತಾಳಂತೆ. ಅತ್ಯಂತ ನಿಗೂಢವಾಗಿ ನಡೆಯುತ್ತಿರುವ ಅನಾಮಿಕ ಮಹಿಳೆಯೊಬ್ಬಳ ಪವಾಡ ಜನರಲ್ಲಿ ಭಾರೀ ಆಶ್ಚರ್ಯ, ಭಯ ಉಂಟುಮಾಡಿರುವ ಘಟನೆ ಪದೇ ಪದೇ ಪುನರಾವರ್ತನೆಯಾಗುತ್ತಿದೆ.
ಎಲ್ಲರಿಗೂ ದಿಗ್ಭ್ರಾಂತ ಮೂಡಿಸಿದ್ದೇನೆಂದರೆ ನಮಾಜ್ ಮುಗಿಯುತ್ತಿದ್ದಂತೆ ಮಹಿಳೆ ಅಲ್ಲಿಂದ ಮಾಯವಾದಂತೆ ಕಾಣಿಸಿದೆ. ಇದನ್ನು ಪ್ರತ್ಯಕ್ಷದರ್ಶಿಯೋರ್ವ ತನ್ನ ಮೊಬೈಲ್’ನಲ್ಲಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದ್ದಾನೆ.
ಈಕೆ ಪ್ರತ್ಯಕ್ಷವಾಗುವ, ಮಾಯವಾಗುವ ಮಹಿಳೆ ಮರದ ಮೇಲಕ್ಕೆ ಹತ್ತಿದ್ದನ್ನಾಗಲಿ, ಕೆಳಕ್ಕೆ ಇಳಿದದ್ದನ್ನಾಗಲಿ ಯಾರೂ ಕಂಡಿಲ್ಲವಂತೆ. ಮನುಷ್ಯರ ತೂಕ ತಡೆಯದೆ ಮುರಿದು ಬೀಳುವಂತಹ ಅತ್ಯಂತ ತೆಳುವಾದ ರೆಂಬೆಯ ಮೇಲೆ ಈ ಮಹಿಳೆ ಕುಳಿತು ನಮಾಜ್ ಮಾಡುವುದಾದರೂ ಹೇಗೆ ಎಂಬುದು ಇಲ್ಲಿನ ಜನರ ಪ್ರಶ್ನೆಯಾಗಿದೆ.
ಅಷ್ಟೇ ಅಲ್ಲ, ನಮಾಜ್ ಮಾಡುವ ವೇಳೆ ಯಾವುದೇ ಆಧಾರವೂ ಇಲ್ಲದೆ ಆ ತೆಳು ರೆಂಬೆಯ ಮೇಲೆ ಕೂರುವುದಾದರೂ ಹೇಗೆ ಎಂಬುದು ಬಿಡಿಸಲಾಗದ ಸಮಸ್ಯೆಯಾಗಿದೆ. ಜೊತೆಗೆ ಆಕೆ ಎಲ್ಲಿದ್ದಾಳೆ ಎಂಬುದು ಕೂಡ ಗೊತ್ತಿಲ್ಲ. ಈ ಘಟನೆ ಕುರಿತು ಜನರು ಅನೇಕ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.ಇದೇನು ಯಾರೋ ಒಬ್ಬಿಬ್ಬರು ಹೆಣೆದ ಕಟ್ಟುಕಥೆ ಎನ್ನುವಂತಿಲ್ಲ. ಸುತ್ತಮುತ್ತಲ ಹಳ್ಳಿಗಳವರೆಲ್ಲ ಈ ಚಮತ್ಕಾರಿಕವಾದ ನಿಗೂಢ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಇದು ವಿಜ್ಞಾನಕ್ಕೊಂದು ಸವಾಲಾಗಿ ಪರಿಣಮಿಸಿದೆ.
Comments are closed.