https://youtu.be/GcZhRoKbGq4
ಡೆಲಿವರಿ ಎಂದರೆ ಯಾವ ಮಹಿಳೆಗೆ ಆತಂಕವಾಗುವುದಿಲ್ಲ ಹೇಳಿ. ಆದರೆ ಇಲ್ಲೊಬ್ಬ ಮಹಿಳೆ ಸಹಿಸಲಾಗದ ಆ ನೋವನ್ನು ನೆನೆದು ಕಂಗಾಲಾಗಿಲ್ಲ. ಗರ್ಭಿಣಿಯಾದರೂ ತನ್ನ ಮೆಚ್ಚಿನ ಹವ್ಯಾಸ ಪೋಲ್ ನೃತ್ಯ ಮಾಡುವುದನ್ನು ನಿಲ್ಲಿಸದಿದ್ದ ಆಕೆ ಇನ್ನೇನು ಡೆಲಿವರಿಯಾಗುತ್ತದೆ ಎನ್ನುವಾಗಲೂ ಡಾನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಇಂಗ್ಲೆಂಡಿನ ನೊಟ್ಟಿಂಗ್‍ಹ್ಯಾಮ್ ನಿವಾಸಿ ಕ್ಯಾಟ್ ಬೈಲಿ ಉಪನ್ಯಾಸಕಿ ಪರಿವರ್ತಿತ ಪೋಲ್ ಡಾನ್ಸರ್ ಆಗಿದ್ದಾರೆ. ತುಂಬು ಗರ್ಭಿಣಿಯಾಗಿದ್ದರೂ ಅವರು ಪೋಲ್ ನೃತ್ಯ ಮಾಡುವುದನ್ನು ಬಿಟ್ಟಿರಲಿಲ್ಲ. ಮತ್ತೀಗ ಡೆಲಿವರಿ ಸಮಯದಲ್ಲೂ ವಿಭಿನ್ನ ಪೋಸ್ ಗಳನ್ನು ಪ್ರದರ್ಶಿಸಿದ್ದಾರೆ.
ಪೋಲ್ ಏರಿ ಕಾಲನ್ನ ಮೇಲಕ್ಕೆ ಚಾಚಿ ಒತ್ತಡದಿಂದ ನಿರಾಳರಾಗಿದ್ದಾರೆ. ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿರುವ ಅವರು, ನನಗೆ ಹೆರಿಗೆ ಸಮಯ ಸಮೀಪಿಸಿದೆ. ಕೆಲವೇ ಗಂಟೆಗಳಲ್ಲಿ ಡೆಲಿವರಿಯಾಗುತ್ತದೆ. ಅದಕ್ಕೂ ಮುಂಚೆ ಒಂದು ಸಲ ಪೋಲ್ ಡ್ಯಾನ್ಸ್ ಮಾಡಿಬಿಡ್ತೀನಿ ಅಂತ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.
ಅವರ ಈ ಆತ್ಮವಿಶ್ವಾಸದ ಡ್ಯಾನ್ಸ್ ನ ವಿಡಿಯೋವನ್ನೊಮ್ಮೆ ಸದ್ಯದಲ್ಲೇ ಫೋಸ್ಟ್ ಮಾಡುತ್ತೇವೆ.
Comments are closed.