https://youtu.be/Vay-JSCc1-0
ದುಬೈ: ತಿರುವನಂತಪುರಂ ನಿಂದ ತೆರಳಿದ್ದ ಎಮರೇಟ್ಸ್ ವಿಮಾನವೊಂದು ದುಬೈ ನ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಸಂಭಾವ್ಯ ದುರಂತವೊಂದು ತಪ್ಪಿದೆ.
ಬೋಯಿಂಗ್ 777 ವಿಮಾನ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ದುಬೈ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ವಿಮಾನವಾಗಿದ್ದು, ಬಲಭಾಗದ ರೆಕ್ಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ವಿಮಾನಕ್ಕೆ ಹರಡುವ ಮುನ್ನ ತುರ್ತು ಭೂಸ್ಪರ್ಶ ಮಾಡಿ ವಿಮಾನದಲ್ಲಿದ್ದ 275 ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ, ನಂತರ ವಿಮಾನ ಹೊತ್ತಿ ಉರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನದ ಬಲಭಾಗದ ರೆಕ್ಕೆಯಲ್ಲಿ ಬೆಂಕಿ ಕಾಣಿಸಿಕೊಂಡಿತು, ನಂತರ ಲ್ಯಾಂಡಿಂಗ್ ಗೇರ್ ಕುಸಿದು ಬಿದ್ದ ಪರಿಣಾಮ ವಿಮಾನ ಲ್ಯಾಂಡ್ ಆಗುವ ವೇಳೆ ಕೆಲ ಕಾಲ ಸ್ಕಿಡ್ ಆಯಿತು ಎಂದು ಪೈಲಟ್ ಮಾಹಿತಿ ನೀಡಿದ್ದಾರೆ. ಘಟನೆಯ ಪರಿಣಾಮ ದುಬೈ ನಿಂದ ತೆರಳಬೇಕಿದ್ದ ವಿಮಾಗಳು ವಿಳಂಬವಾಗಿದ್ದರೆ ದುಬೈ ಗೆ ಬರಬೇಕಿದ್ದ ವಿಮಾನಗಳ ಮಾರ್ಗವನ್ನು ಶಾರ್ಜಾಗೆ ಬದಲಾವಣೆ ಮಾಡಲಾಗಿದೆ.
Comments are closed.