ಬೆಂಗಳೂರು: ಬಿಗ್ಬಾಸ್ ಮೂಲಕ ಖ್ಯಾತಿ ಪಡೆದ ಹುಚ್ಚ ವೆಂಕಟ್ ಯಾವುದೇ ಸುದ್ದಿಯಿಲ್ಲದೇ ಮಡಿಕೇರಿಯಲ್ಲಿ ಮದುವೆಯಾಗಿ್ದ್ದಾರಂತೆ. ಅದನ್ನು ಸ್ವತಃ ಅವರೇ ವಿಡಿಯೋ ಮೂಲಕ ಜನತೆಗೆ ತಿಳಿಸಿದ್ದಾರೆ.
ತಾನು ಐಶ್ವರ್ಯಾ ಎಂಬ ಯುವತಿ ಯನ್ನು ಕೆಲ ದಿನಗಳ ಹಿಂದೆ ಮದುವೆಯಾಗಿರುವುದಾಗಿ ಹುಚ್ಚ ವೆಂಕಟ್ ಅವರೇ ಫೇಸ್ಬುಕ್ನಲ್ಲಿ ಫೋಟೋ ಒಂದನ್ನು ಪ್ರಕಟಿಸಿದ್ದಾರೆ. ತಾನೇ ನಟಿಸಿ ನಿರ್ದೇಶನ ಮಾಡುತ್ತಿರುವ ‘ಡಿಕ್ಟೇಟರ್ ಹುಚ್ಚ ವೆಂಕಟ್’ ಚಿತ್ರದಲ್ಲಿ ನಾಯಕಿಯಾಗಿ ಐಶ್ವರ್ಯ ನಟಿಸಿದ್ದಾರೆಂದು ವಿಡಿಯೋದಲ್ಲಿ ಅವರು ಹೇಳಿಕೊಂಡಿದ್ದಾರೆ.
ನಾನು ಐಶ್ವರ್ಯ ಒಬ್ಬರಿಗೊಬ್ಬರು ಪ್ರೀತಿಸಿ ಮದುವೆ ಆಗಿದ್ದು ಮನೆಯಲ್ಲಿ ವಿರೋಧವಿದೆ. ನಮ್ಮ ಮದುವೆ ಆದ ಮೇಲೆ ಮನೆಯವರ ಆರ್ಶೀವಾದ ತೆಗೆದುಕೊಳ್ಳಲು ಫೋನ್ ಮಾಡಿದೆ. ಆಗ ದೊಡ್ಡಮ್ಮ ತೀರಿಕೊಂಡ ವಿಚಾರ ತಿಳಿಯಿತು. ಹಾಗಾಗಿ ಮದುವೆ ವಿಷಯ ಹೇಳುವುದು ಬೇಡವೆಂದು ಸುಮ್ಮನಿದ್ದೆ ಎಂದು ಹುಚ್ಚ ವೆಂಕಟ್ ಹೇಳಿದರು.
Comments are closed.