ಪ್ರಮುಖ ವರದಿಗಳು

ಮುಂಬೈಯ ಸಾರ್ವಜನಿಕರು ನಡೆದಾಡುವ ರಸ್ತೆಯಲ್ಲೇ ಸೆಕ್ಸ್ ನಡೆಸಿದ ಜೋಡಿ ! ವೀಡಿಯೊ ವೈರಲ್

Pinterest LinkedIn Tumblr

ಮುಂಬೈ: ಸಾರ್ವಜನಿಕ ಸ್ಥಳದಲ್ಲೇ ಬಹಿರಂಗವಾಗಿ ಜೋಡಿಯೊಂದು ಲೈಂಗಿಕ ಕ್ರಿಯೆ ನಡೆಸಿದ ಘಟನೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದಿದೆ.

ಮುಂಬೈನ ಮರೀನ್ ಡ್ರೈವ್​ ಪ್ರದೇಶದ ನಾರಿಮನ್​ ಕೇಂದ್ರದ ಬಳಿಯಿರುವ ರಸ್ತೆ ವಿಭಜಕದ ಮೇಲೆ ಹಾಡಹಗಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಜೋಡಿಯೊಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ರಸ್ತೆಯಲ್ಲಿ ನೂರಾರು ಜನ ಓಡಾಡುತ್ತಿದ್ದರೂ ಅದನ್ನು ಲೆಕ್ಕಿಸದೇ ಮನಬಂದಂತೆ ವರ್ತಿಸುತ್ತಿದ್ದ ಯುವ ಜೋಡಿಯನ್ನು ಕಂಡು ಮುಜಗರಕ್ಕೀಡಾದ ಸಾರ್ವಜನಿಕರು ಸ್ಥಳೀಯ ಮರೀನ್ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ.

https://youtu.be/G4LYSSa1YHU

ಇನ್ನು ರಸ್ತೆಯಲ್ಲಿ ಹೋಗುತ್ತಿದ್ದ ನೂರಾರು ಮಂದಿ ಈ ಕೃತ್ಯದ ಫೋಟೋ ಮತ್ತು ವಿಡಿಯೋ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಮೊದಲು ಮಹಿಳೆಯನ್ನು ಹಿಡಿದಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಪುರುಷ ಪರಾರಿಯಾಗಿದ್ದಾನೆ.

ಮಹಿಳೆ ನೋಡಲು ವಿದೇಶಿ ಪ್ರಜೆಯಂತಿದ್ದು, ವಶಕ್ಕೆ ಪಡೆದಿರುವ ಪೊಲೀಸರು ಆಕೆಯನ್ನು ವಿಚಾರಣೆಗೆೊಳಪಡಿಸಿದ್ದಾರೆ. ಈ ವೇಳೆ ತನ್ನ ಬಗ್ಗೆ ಹೇಳಿಕೊಂಡ ಮಹಿಳೆ ಮೊದ ಮೊದಲು ನಾನು ಗೋವಾದವಳೆಂದು ಹೇಳಿ ಕೊಂಡಿದ್ದಾಳೆ. ನಂತರ ಗೊಂದಲಮಯವಾದ ಹೇಳಿಕೆಗಳನ್ನು ನೀಡಿದ್ದಾಳೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಮೇಲ್ನೋಟಕ್ಕೆ ಮಹಿಳೆ ಮಾನಸಿಕ ಅಸ್ವಸ್ಥಳಂತೆ ಕಾಣುತ್ತಾಳೆ. ಆಕೆಯ ವಿಳಾಸ ಮತ್ತು ಸಂಬಂಧಿಕರ ದೂರವಾಣಿ ಸಂಖ್ಯೆಯನ್ನು ತಿಳಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾಳೆ. ಆಕೆಯನ್ನು ಮಹಿಳಾ ರಿಮ್ಯಾಂಡ್​ ಹೋಮ್​ಗೆ ಸ್ಥಳಾಂತರಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಅಂತೆಯೇ ಪರಾರಿಯಾಗಿರುವ ವ್ಯಕ್ತಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಡಿಸಿಪಿ ಮನೋಜ್​ ಕುಮಾರ್​ ಶರ್ಮಾ ಅವರು ತಿಳಿಸಿದ್ದಾರೆ.

ಸಾರ್ವಜನಿಕ ಪ್ರದೇಶದಲ್ಲಿ ಅನುಚಿತ ವರ್ತನೆ ಬಗ್ಗೆ ಪೊಲೀಸರು ಇದುವರೆಗೂ ಯಾವುದೇ ದೂರು ದಾಖಲಿಸಿಕೊಂಡಿಲ್ಲ. ಆದರೆ, ಅನುಚಿತ ವರ್ತನೆ ತೋರಿದ ವ್ಯಕ್ತಿಯನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Comments are closed.