ಕರಾವಳಿ

‘ಜೀವ ಬೆದರಿಕೆಯಿದೆ ಎಂದಿದ್ದರು’: ಶೀರೂರು ಶ್ರೀಗಳ ವಕೀಲರಿಂದ ತನಿಖೆಗೆ ಆಗ್ರಹ

Pinterest LinkedIn Tumblr

ಉಡುಪಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಅಸ್ತಂಗತರಾಗಿದ್ದ ಶೀರೂರು ಶ್ರೀಗಳಿಗೆ ಬೆದರಿಕೆ ಇದ್ದಿತ್ತು. ಈ ಬಗ್ಗೆ ನನ್ನ ಬಳಿ ಹೇಳಿಕೊಂಡಿದ್ದರು. ಎಂಬ ಸ್ಫೋಟಕ ಮಾಹಿತಿಯನ್ನು ಶೀರೂರು ಶ್ರೀಗಳು, ಪಟ್ಟದ ದೇವರ ಹಸ್ತಾಂತರದ ಬಗ್ಗೆ ನ್ಯಾಯಾಲಯದದಲ್ಲಿ ಹೂಡಿದ್ದ ದಾವೆಯ ಪರ ವಾದಿಸುತ್ತಿರುವ ವಕೀಲ ಕುಂದಾಪುರದ ರವಿಕಿರಣ್ ಮುರ್ಡೇಶ್ವರ್ ಬಿಚ್ಚಿಟ್ಟಿದ್ದಾರೆ.

ಶೀರೂರು ಶ್ರೀಗಳು ಜೂನ್ 28 ರಂದು ಕುಂದಾಪುರದ ಕಚೇರಿಗೆ ಬಂದಿದ್ದು ಪುತ್ತಿಗೆ ಮಠವನ್ನು ಹೊರತುಪಡಿಸಿ ಉಳಿದ ಆರು ಮಠಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲು ತಮಗೆ ಸೂಚನೆ ನೀಡಿದ್ದರು. ಅದರಂತೆ ನಾನು ನಿನ್ನೆಯಷ್ಟೆ ಫಿರ್ಯಾದು ಸಹ ಸಿದ್ಧ ಪಡಿಸಿದ್ದೆ ಎಂದು ವಕೀಲ ರವಿಕಿರಣ್ ಮಾಹಿತಿ ನೀಡಿದ್ದಾರೆ. ಶ್ರೀಗಳು ತಮ್ಮ ಜೀವಕ್ಕೆ ಅಪಾಯವೂ ಆಗಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು ಹಾಗಾಗಿ ಆರೂ ಮಠಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಿದ್ದರು. ಶೀರೂರು ಶ್ರೀಗಳ ಸಾವಿನ ಸಮರ್ಪಕ ತನಿಖೆ ಆಗಬೇಕು, ಅವರ ಸಾವಿನ ಕಾರಣ ಬಹಿರಂಗವಾಗಬೇಕು ಅವರ ಹೋರಾಟ ವ್ಯರ್ಥವಾಗಬಾರದು ಎಂದು ರವಿಕರಣ್ ಅವರು ಆಗ್ರಹಿಸಿದ್ದಾರೆ.

Comments are closed.