ಕರಾವಳಿ

ಕುಂದಾಪುರ ಡಾ. ರಾಜ್ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ (Video)

Pinterest LinkedIn Tumblr

ಕುಂದಾಪುರ: ತಾಲೂಕಿನಲ್ಲಿ ಕನ್ನಡಾಭಿಮಾನದ ಹೆಸರಿನಲ್ಲಿ ಹಲವಾರು ವರ್ಷಗಳಿಂದ ಕಾರ್ಯಚರಿಸುತ್ತಿರುವ ಡಾ. ರಾಜ್ ಸಂಘಟನೆಯವರು ಕನ್ನಡ ರಾಜ್ಯೋತ್ಸವವನ್ನು ಕುಂದಾಪುರ ಹೊಸ ಬಸ್ ನಿಲ್ದಾಣದಲ್ಲಿ ಗುರುವಾರ ಆಚರಿಸಿದರು.

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ಧ್ವಜಾರೋಹಣ ನೆರವೇರಿಸಿದ ಬಳಿಕ ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್. ನಾಯ್ಕ್ ಮಾತನಾಡಿ, ಕನ್ನಡ ನಾಡು, ಕರ್ನಾಟಕ ಹೆಸರು ಬರಲು ಅವಿರತವಾಗಿ ಶ್ರಮಿಸಿ ತ್ಯಾಗ ಮಾಡಿದ ಮಹಾನುಭಾವರನ್ನು ನೆನೆದುಕೊಂಡು ಅವರು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ಸಾಗಬೇಕಿದೆ. ಕನ್ನಡ ಭಾಷೆಗೆ ಬಹಳಷ್ಟು ಇತಿಹಾಸವಿದ್ದು ಅದರ ಉಳಿವಿಗೆ ಯುವಕರು ಮುಂದಾಗಬೇಕು. ಸರಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆ ವ್ಯವಹಾರ ಆಗಬೇಕೆನ್ನುವ ನಿಟ್ಟಿನಲ್ಲಿ ಅದನ್ನು ಪಾಲನೆ ಮಾಡಲಾಗುತ್ತಿದೆ. ಕನ್ನಡದ ಬಗೆಗಿನ ಅಭಿಮಾನ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ವರ್ಷವಿಡೀ ಕನ್ನಡ ಭಾಷಾಭಿಮಾನ ನೆಲ ಜಲದ ಬಗೆಗಿನ ಪ್ರೀತಿ ಉಳಿಸಿ, ಬಳಸಿ ಬೆಳಸಬೇಕು. ಕುಂದಾಪುರದ ಡಾ. ರಾಜ್ ಸಂಘಟನೆ ಉತ್ತಮ ಕಾರ್ಯನಿರ್ವಹಣೆ ಮೂಲಕ ಸಮಾಜದಲ್ಲಿ ಸನ್ನಡತೆಯಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಶಾಲಿಸಿದೆ ಎಂದು ಶ್ಲಾಘಿಸಿದರು.

 

ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಕನ್ನಡ ಭಾಷೆಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಅನ್ನ ಕೊಡುವ ವ್ಯಾವಹಾರಿಕ ಭಾಷೆಯ ಜೊತೆ ಮನೆ ಮಾತನ್ನು ಮುಂದುವರಿಸಿಕೊಂಡು ಉಳಿಸಿಕೊಂಡು ಹೋಗಬೇಕಾದ ಜವಬ್ದಾರಿ ಯುವಕರ ಮೇಲಿದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಕೇವಲ ಸರಕಾರಿ ಮಟ್ಟ ಹಾಗೂ ತಳಮಟ್ಟದಲ್ಲಿ ನಡೆಯುತ್ತಿದೆ. ನಮ್ಮ ನೆಲೆ ಜಲ ಭಾಷೆಯಾದ ಕನ್ನಡವನ್ನು ಪ್ರೀತಿಸುವ ಕಾರ್ಯವಾಗಬೇಕು. ಅಖಂಡ ಕರ್ನಾಟಕ ಕಲ್ಪನೆಯ ಹೋರಾಟಗಾರನ್ನು ನೆನಪಿಸಿಕೊಂಡು ಅವರ ಸನ್ನಡೆತೆಗಳನ್ನು ಮೈಗೂಡಿಸಿಕೊಳ್ಳೋಣ ಎಂದರು.

ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಖಾರ್ವಿ ಶುಭ ಹಾರೈಸಿದರು. ಮಂಡ್ಯದ ಪ್ರೊಫೆಸರ್ ಮಹೇಶ್ ಗೌಡ ಅವರು ಕನ್ನಡ ರಾಜ್ಯೋತ್ಸವದ ಮಹತ್ವವನ್ನು ಹೇಳಿದರು.

ಈ ಸಂದರ್ಭ ಡಾ. ರಾಜ್ ಸಂಘಟನೆ ಅಧ್ಯಕ್ಷ ರತ್ನಾಕರ ಪೂಜಾರಿ, ಸಂಘಟನೆಯ ಸಚಿನ್ ಖಾರ್ವಿ,ಪ್ರಭಾಕರ ಖಾರ್ವಿ, ಅಗಸ್ಟೀನ್ ಡಿಸೋಜ, ರಾಯ್ಸನ್ ಡಿಸೋಜಾ,ಕಿಶನ್ ಖಾರ್ವಿ, ರಾಘವೇಂದ್ರ ಕೋಡಿ, ಸಾಗರ ಪೂಜಾರಿ, ಉದ್ಯಮಿ ಅಜೇಂದ್ರ ಶೆಟ್ಟಿ, ಮನ್ಸೂರ್ ಮರವಂತೆ, ರಾಜ ಹೇರಿಕೆರೆ, ನವೀನ್ ಪೂಜಾರಿ, ಶ್ರೀಧರ ಗಾಣಿಗ, ರಾಮಚಂದ್ರ, ಗಣೇಶ್ ಪೂಜಾರಿ ಉಪಸ್ಥಿತರಿದ್ದರು.

ಸುನೀಲ್ ಖಾರ್ವಿ ತಲ್ಲೂರು ಸ್ವಾಗತಿಸಿದರು. ಡುಂಡಿರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಮಝರ್ ಕುಂದಾಪುರ ವಂದಿಸಿದರು. ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.