ಕರಾವಳಿ

ಕೋಟ ಅವಳಿ ಕೊಲೆಯ ಆರು ಆರೋಪಿಗಳಿಗೆ ಫೆ.15ರವರೆಗೆ ಪೊಲೀಸ್ ಕಸ್ಟಡಿ, ಮುಂದುವರಿಯಲಿದೆ ತನಿಖೆ

Pinterest LinkedIn Tumblr

ಕುಂದಾಪುರ: ಕೋಟ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ಭರತ್ ಶ್ರೀಯಾನ್ ಹಾಗೂ ಯತೀಶ್ ಕಾಂಚನ್ ಎಂಬಿಬ್ಬರನ್ನು ಕೊಂದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಶುಕ್ರವಾರ ಸಂಜೆ ಸುಮಾರಿಗೆ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ಎಂಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಕೋಟ ಮೂಲದ ರೌಡಿ ಶೀಟರ್ ಗಳಾದ ಹರೀಶ್ ರೆಡ್ಡಿ, ರಾಜಶೇಖರ ರೆಡ್ಡಿ, ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಉಡುಪಿ ಮೂಲದ ಮಹೇಶ್ ಗಾಣಿಗ, ರವಿ, ತಲ್ಲೂರು ರವಿ ಅಲಿಯಾಸ್ ಮೆಡಿಕಲ್ ರವಿ ಬಂಧಿತ ಆರೋಪಿಗಳಾಗಿದ್ದು ರೆಡ್ಡಿ ಸೋದರರಲ್ಲಿ ಇನ್ನೋರ್ವನಾದ ಚಂದ್ರಶೇಖರ್ ರೆಡ್ಡಿ ಮತ್ತು ಇನ್ನು ಕೆಲವು ಆರೋಪಿಗಳನ್ನು ಇನ್ನೂ ಬಂಧಿಸಬೇಕಿದೆ.

ಜ.26 ಶನಿವಾರ ತಡರಾತ್ರಿ ಕೊಲೆಯಾದ ಭರತ್ ಮತ್ತು ಯತೀಶ್ ಇಬ್ಬರು ಕೂಡ ಸ್ನೇಹಿತ ಲೋಹಿತ್ ಕರೆಗೆ ಓಗೊಟ್ಟು ಆತನನ್ನು ರಕ್ಷಿಸಲು ಬಂದಿದ್ದರು. ಅಂದು ತಡರಾತ್ರಿ ಟಾಯ್ಲೆಟ್ ಪಿಟ್ ವಿಚಾರದಲ್ಲಿ ರೌಡಿಶೀಟರ್ ಸೋದರರು ಮತ್ತು ತಂಡ ಲೋಹಿತ್ ಮೇಲೆ‌ ಅಟ್ಯಾಕ್ ಮಾಡಲು‌ ಆತನ‌ ಮನೆ ಮುಂದೆ ಆಗಮಿಸಿದ್ದರು. ಈ ವೇಳೆ ಗಲಾಟೆ ತಪ್ಪಿಸಲು ಬಂದ ಯತೀಶ್ ಹಾಗೂ ಭರತನನ್ನು ದುಷ್ಕರ್ಮಿಗಳು ಮನಸ್ಸೋಇಚ್ಚೆ ತಲವಾರು ದಾಳಿ ನಡೆಸಿ ಕೊಂದಿದ್ದರು. ಬಳಿಕ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದು ಮನೆಯಿಂದ ಅನತಿ ದೂರದಲ್ಲಿ ತಲವಾರು ಎಸೆದಿದ್ದರು. ಮೇಲ್ನೋಟಕ್ಕೆ ಸಂಘಟನೆ ದ್ವೇಷಗಳು ಟಾಯ್ಲೆಟ್ ಪಿಟ್ ವಿಚಾರಕ್ಕೆ ತಳುಕು ಹಾಕಿಕೊಂಡಿದ್ದು ಕೆಲವೊಂದು ದ್ವೇಷಗಳ ಹಿನ್ನಲೆ ರೆಡ್ಡಿ ಸೋದರರಿಗೆ ಜಿ.ಪಂ ಸದಸ್ಯನಿಂದ ಸಿಕ್ಕ ವಾಗ್ದಾನ ಈ ಕೊಲೆಗೆ ಪ್ರೇರಣೆ ಎನ್ನಲಾಗುತ್ತಿದೆ.

ಪ್ರಕರಣ ನಡೆದ ತರುವಾಯ ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಆರೋಪಿಗಳ ಪತ್ತೆಗೆ ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಡಿವೈಎಸ್ಪಿ ಟಿ. ಜೈಶಂಕರ್ ನೇತೃತ್ವದಲ್ಲಿ ನಾಲ್ಕು ಪತ್ತೆತಂಡ ರಚಿಸಿದ್ದರು. ಕಾರ್ಕಳ ಎಎಸ್ಪಿ ಕೃಷ್ಣಕಾಂತ್, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಸಿಪಿಐಗಳಾದ ಸುದರ್ಶನ್, ಶ್ರೀಕಾಂತ್, ಮಹೇಶ್ ಪ್ರಸಾದ್, ಮಂಜುನಾಥ, ಸಂಪತ್, ಕಿರಣ್, ಡಿಸಿಐಬಿ ತಂಡ, ಕೋಟ, ಬ್ರಹ್ಮಾವರ, ಉಡುಪಿ, ಹಿರಿಯಡಕ ಠಾಣೆಯ ಪಿಎಸ್ಐಗಳು, ಸಿಬ್ಬಂದಿಗಳು ತನಿಖೆಯಲ್ಲಿದ್ದರು.

ಆರೋಪಿಗಳನ್ನು ವಿಚಾರಣೆಗಿನ್ನು ಒಳಪಡಿಸಬೇಕಿರುವ ಅಗತ್ಯತೆಯಿರುವ ಹಿನ್ನೆಲೆ ತನಿಖಾಧಿಕಾರಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳಿದ್ದು ನ್ಯಾಯಾಧೀಶರು ಫೆ.15ರವರೆಗೆ (ಇಂದಿನಿಂದ ಎಂಟು ದಿನ) ಕಸ್ಟಡಿಗೆ ನೀಡಿದ್ದಾರೆ.

ಇಬ್ಬರ ಆರೋಪಿಗಳ ಪರ ವಕಾಲತ್ತು
ಇನ್ನು ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳಾದ ರವೀಂದ್ರ ಹಾಗೂ ರಾಘವೇಂದ್ರ ಕಾಂಚನ್ ಪರವಾಗಿ ಕುಂದಾಪುರ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಕಾಲತ್ತು ಸಲ್ಲಿಸಿದ್ದಾರೆ. ರಿಮ್ಯಾಂಡ್ ಅರ್ಜಿಗೂ ಪೂರ್ವದಲ್ಲಿ ವಾದ ಮಂಡಿಸಿದರು. ತನ್ನ ಕಕ್ಷಿದಾರ ರಾಘವೇಂದ್ರ ಕಾಂಚನ್ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದು ಗೌರವಾನ್ವಿತರಾಗಿದ್ದು ಅವರು ಘಟನೆ ನಡೆಯುವಾಗ ಸ್ಥಳಕ್ಕೆ ಹೋಗಿಲ್ಲ. ಅವರ ಬಳಿ ಆಯುಧ ರಿಕವರಿ ಇಲ್ಲ. ಹಾಗಾಗಿ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಬಾರದೆಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ: 

ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)

ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)

ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು

ಕೋಟ ಆಪ್ತಮಿತ್ರರನ್ನು ಕೊಂದ ಕೊಲೆಗಾರರ ಪತ್ತೆಗೆ ಚುರುಕುಗೊಂಡ ತನಿಖೆ

ಕೋಟದಲ್ಲಿ ಸ್ನೇಹಿತರಿಬ್ಬರ ಮರ್ಡರ್ ಕೇಸ್: ಆರೋಪಿಗಳಿಗಾಗಿ ಮುಂದುವರಿದ ಶೋಧ

ಕೋಟ ಅವಳಿ ಕೊಲೆ: ಹರೀಶ್ ರೆಡ್ಡಿ ಸಹಚರರು ಇನ್ನೂ ಭೂಗತ!

ಇನ್ನೂ ಪತ್ತೆಯಾಗದ ಕೊಲೆಗಾರರು; ನ್ಯಾಯಕ್ಕಾಗಿ ಆಗ್ರಹಿಸಿ ಫೆ.3ಕ್ಕೆ ಕೋಟ ಬಂದ್

ಕೋಟದಲ್ಲಿ ಅವಳಿ ಕೊಲೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬಂದ್, ಪ್ರತಿಭಟನೆ (Video)

ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳ ಬಂಧನ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಅಂತೆಕಂತೆ!

ಕೋಟ ಡಬ್ಬಲ್ ಮರ್ಡರ್ ಕೇಸ್: ಇಬ್ಬರು ಆರೋಪಿಗಳ ಬಂಧನ

ಕೋಟ ಸ್ನೇಹಿತರ ಕೊಲೆಗೆ ಜಿ.ಪಂ ಸದಸ್ಯನೇ ಸೂತ್ರಧಾರಿ; ಪೊಲೀಸರಿಂದ 6 ಮಂದಿ ಬಂಧನ

Comments are closed.