ಕರಾವಳಿ

ಪೊಲೀಸರಿಗೆ ಖಾಸಗಿ ಜೀವನ ಇಲ್ಲವಾಗಿರುವುದು ಸತ್ಯ: ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಟ್ವೀಟ್ (Video)

Pinterest LinkedIn Tumblr

ಉಡುಪಿ: ಐಪಿಎಸ್’ಗೆ ರಾಜೀನಾಮೆ ನೀಡಿದ ಅಣ್ಣಾಮಲೈಯವರ ಸೇವೆ ರಾಜ್ಯ ಮತ್ತು ದೇಶಕ್ಕೆ ಇನ್ನೂ ಅಗತ್ಯವಿತ್ತು. ಅಣ್ಣಾಮಲೈ ನೀಡುವ ಕಾರಣಗಳೇನೆ ಇದ್ದರೂ, ಪೋಲಿಸರಿಗೆ ಖಾಸಗಿ ಜೀವನ ಇಲ್ಲದಂತಾಗಿದೆ ಎಂಬುದು ಸತ್ಯ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟ್ವೀಟ್ ಮಾಡಿದ್ದಾರೆ.

ಕರಾವಳಿ ಹಾಗೂ ಚಿಕ್ಕಮಗಳುರು ಜಿಲ್ಲೆಯಲ್ಲಿ ಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿ ಅಪರೂಪದ ಅಧಿಕಾರಿಯಾಗಿದ್ದರು. ಕ್ರಿಮಿನಲ್ ಹಿನ್ನೆಲೆಯುಳ್ಳ ಆರೋಪಿಗಳು, ಭೂಗತ ಚಟುವಟಿಕೆಯಲ್ಲಿರುವರನ್ನು ಬಂಧಿಸಿ ಕಾನೂನು ಚೌಕಟ್ಟು ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕೆಲಸದ ಒತ್ತಡ, ಹಾಗೂ ವೈಯಕ್ತಿಕ ಕಾರಣಗಳನ್ನು ಹೇಳಿ ಸಣ್ಣ ವಯಸ್ಸಿನಲ್ಲಿಯೇ ಪೊಲೀಸ್ ಇಲಾಖ್ಯಿಂದ ದೂರವಾಗುವ ಬಗ್ಗೆ ತಿಳಿಸಿದ್ದು ಅವರು ಎಲ್ಲೇ ಇದ್ದರೂ ಕೂಡ ಯಶಸ್ವಿ ವ್ಯಕ್ತಿಯಾಗಿ ಇರುತ್ತಾರೆ ಎಂದು ಕೋಟ ಹೇಳಿದ್ದಾರೆ.

Comments are closed.