ಕರಾವಳಿ

ಉಡುಪಿಯಲ್ಲಿ ಚಲಿಸುತ್ತಿದ್ದ ವೇಳೆಯೇ ಹೊತ್ತಿ ಉರಿದ ಹೋಂಡಾ ಆಕ್ಟಿವಾ, ಸವಾರ ಪಾರು (Video)

Pinterest LinkedIn Tumblr

ಉಡುಪಿ: ಚಲಿಸುತ್ತಿದ್ದ ದ್ವಿಚಕ್ರವಾಹನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ‌ ಕಾಣಿಸಿಕೊಂಡಿದ್ದು ಬೆಂಕಿಯ ತೀವ್ರತೆಗೆ ವಾಹನ ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾದ ಘಟನೆ ಉಡುಪಿಯ ಇಂದ್ರಾಳಿ ಸಮೀಪದ ರೈಲ್ವೇ ಬ್ರಿಡ್ಜ್ ಬಳಿ ಸಂಭವಿಸಿದೆ.

ಮೆಕ್ಯಾನಿಕ್’ವೊಬ್ಬರು ಈ ಆಕ್ಟಿವಾ ವಾಹನ ರಿಪೇರಿ ಮಾಡಿಕೊಂಡು ವಾಪಾಸಾಗುತ್ತಿದ್ದರು, ಮಳೆಯಿಂದ ಈ ವಾಹನದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಈ ಅವಘಡ ಉಂಟಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಷಾತ್ ಸವಾರ ವಾಹನ ದಿಂದ ಇಳಿದು ಬಚಾವಾಗಿದ್ದಾರೆ. ನೋಡನೋಡುತ್ತಿದ್ದಂತೆ, ವಾಹನ ಬೂದಿಯಾಗಿದೆ.

ಮಣಿಪಾಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Comments are closed.