ರಾಷ್ಟ್ರೀಯ

ಹರಿಯಾಣ ಕಾಂಗ್ರೆಸ್ ನಾಯಕ ವಿಕಾಸ್​ ಚೌಧರಿಯನ್ನು ಗುಂಡಿಟ್ಟು ಹತ್ಯೆ ! ವಿಡಿಯೋ ವೈರಲ್

Pinterest LinkedIn Tumblr

ನವದೆಹಲಿ: ಹರಿಯಾಣ ಕಾಂಗ್ರೆಸ್​​ ವಕ್ತಾರ ವಿಕಾಸ್​ ಚೌಧರಿ ಅವರನ್ನು ಅನಾಮಧೆಯ ವ್ಯಕ್ತಿಯೋರ್ವ ಗುಂಡಿಟ್ಟು ಕೊಂದಿದ್ದಾನೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್​ ಆಗಿದೆ.

ವಿಕಾಸ್​ ಫರಿದಾಬಾದ್​ನಲ್ಲಿ ಜಿಮ್​ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಮಾರುತಿ ಸುಝಕಿ ಕಾರನಲ್ಲಿ ಬಂದ ವ್ಯಕ್ತಿಯೋರ್ವ ವಿಕಾಸ್​ ಕಾರಿನ ಮೇಲೆ ಗುಂಡಿನ ಸುರಿಮಳೆ ಸುರಿದಿದ್ದು, 10 ಗುಂಡುಗಳನ್ನು ಹಾರಿಸಿದ್ದಾನೆ. ತೀವ್ರವಾಗಿ ಗಾಯಗೊಂಡ ವಿಕಾಸ್​ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಘಟನೆ ಬಗ್ಗೆ ಕಾಂಗ್ರೆಸ್​ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಂಗಲ್​ ರಾಜ್​ ಆಡಳಿತ ಜಾರಿಯಲ್ಲಿದೆ ಎಂದು ವ್ಯಂಗ್ಯವಾಡಿದೆ. “ರಾಜ್ಯದಲ್ಲಿ ಯಾರಿಗೂ ಕಾನೂನಿನ ಭಯವಿಲ್ಲ. ಈ ರೀತಿ ಪ್ರಕರಣಗಳು ನಡೆಯುತ್ತಲೇ ಇದೆ. ಬುಧವಾರ ಯುವತಿಯೊಬ್ಬರಿಗೆ ಕಿರುಕುಳ ನೀಡಲಾಗಿತ್ತು. ವಿಕಾಸ್​ ಹತ್ಯೆ ಸಂಬಂಧ ತನಿಖೆ ನಡೆಯಬೇಕಿದೆ,” ಎಂದು ಹರಿಯಾಣ ಕಾಂಗ್ರೆಸ್​ ಮುಖ್ಯಸ್ಥ ಅಶೋಕ್​ ತನ್ವಾರ್​ ಆಗ್ರಹಿಸಿದ್ದಾರೆ.

ಇಂಡಿಯನ್​ ನ್ಯಾಷನಲ್​ ಲೋಕ್​ ದಳದಲ್ಲಿದ್ದ ಚೌಧರಿ ನಂತರ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದರು. ಕೊಲೆಗೆ ಕಾರಣವೇನು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

Comments are closed.