ಬೆಂಗಳೂರು: ಈಗಿನ ಹರೆಯದ ಯುವತಿಯರ ಕಥೆಯನ್ನಿಟ್ಟುಕೊಂಡು ನಟಿ ವಿಜಯಲಕ್ಷ್ಮೀ ಸಿಂಗ್ ನಿರ್ದೇಶಿಸಿರುವ ‘ಯಾನ’ ಕನ್ನಡ ಸಿನೆಮಾದ ‘ಮಿರ್ಚಿ’ ವಿಡಿಯೋ ಹಾಡನ್ನು ಶುಕ್ರವಾರ ಲಹರಿ ಮ್ಯೂಸಿಕ್ ಯೂಟ್ಯೂಬ್’ನಲ್ಲಿ ಬಿಡುಗಡೆಗೊಲಿದೆ.
‘ಮಿರ್ಚಿ’ ವಿಡಿಯೋ ಹಾಡು ಕೇಳಲು ಹಾಗು ನೋಡಲು ಬಾಲಿವುಡ್ ಸಿನೆಮಾಗಳ ಹಿಟ್ ಹಾಡುಗಳನ್ನು ಮೀರಿಸುವಂತಿದೆ. ಬಿಡುಗಡೆಗೊಂಡ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಹಾಗು ‘ಐ’ ಎಂಟರ್ಟೈನ್ಮೆಂಟ್’ನ ವೈಭವಿ, ವೈನಿಧಿ ಮತ್ತು ವೈಸಿರಿ ಯಾನ ಸಿನೆಮಾವನ್ನು ನಿರ್ಮಿಸಿದ್ದಾರೆ.
‘ಯಾನ’ ಹಿರಿಯ ಕಲಾವಿದ ಜೈ ಜಗದೀಶ್ ಮತ್ತು ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ದಂಪತಿಯ ಮೂವರು ಪುತ್ರಿಯರಾದ ವೈನಿಧಿ. ವೈಭವಿ, ವೈಸಿರಿ ಅವರ ಚೊಚ್ಚಲ ಸಿನಿಮಾ.
ಸಿನಿಮಾದಲ್ಲಿ ಈಗಿನ ಹರೆಯದ ಯುವತಿಯರ ಕಥೆ ಹೇಳಲಾಗುತ್ತಿದೆ. ಲವ್ವು, ಲೈಫು ಮತ್ತು ಒಂದಷ್ಟು ಎಡವಟ್ಟುಗಳ ಸಮ್ಮಿಶ್ರಣ ಸಿನಿಮಾದಲ್ಲಿ ಇರಲಿದೆಯಂತೆ. ಎಲ್ಲ ವರ್ಗದವರಿಗೂ ಸಿನಿಮಾ ಇಷ್ಟವಾಗಲಿದೆ ಎಂಬುದು ಚಿತ್ರತಂಡದ ಮಾತು.
ಹಿರಿಯ ನಟರಾದ ಅನಂತ್ ನಾಗ್ , ಸುಹಾಸಿನಿ, ರಾಮಕೃಷ್ಣ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ, ರಂಗಾಯಣ ರಘು, ಸಾಧು ಕೋಕಿಲಾ, ಶಿವರಾಜ್ ಕೆ.ಆರ್ ಪೇಟೆ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ದು, ಅನೂಪ್ ಸಿಳೀನ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.
Comments are closed.