ಅಂತರಾಷ್ಟ್ರೀಯ

ಈ ಭಯಾನಕ ವೀಡಿಯೊ ನೋಡಿ ! ಲಿಫ್ಟ್​ ಒಳಗೆ ರೋಪ್​ನಲ್ಲಿ ಕತ್ತು ಸಿಲುಕಿ ನೇತಾಡುತ್ತಿದ್ದ ಸಹೋದರನ ಜೀವ ಉಳಿಸಿದ ಸಹೋದರಿ

Pinterest LinkedIn Tumblr

ನವದೆಹಲಿ: ಆಕಸ್ಮಿಕವಾಗಿ ಲಿಫ್ಟ್​ ಒಳಗಿನ ಟಾಯ್​ ರೋಪ್​ಗೆ ಕತ್ತು ಸಿಲುಕಿ ನೇತಾಡುತ್ತಿದ್ದ ಸಹೋದರನನ್ನು ತನ್ನ ಸಮಯಪ್ರಜ್ಞೆಯಿಂದ ಸಹೋದರಿ ರಕ್ಷಣೆ ಮಾಡಿರುವ ಘಟನೆ ಟರ್ಕಿಯ ಇಸ್ತಾಂಬುಲ್​ನಲ್ಲಿ ನಡೆದಿದೆ.

https://youtu.be/pCx1XdVQWeY

ಕಳೆದ ಬುಧವಾರ ಈ ಘಟನೆ ಬೆಳಕಿಗೆ ಬಂದಿದ್ದು, ಲಿಫ್ಟ್​ ಒಳಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾದಲ್ಲಿ ಘಟನೆಯ ದೃಶ್ಯಾವಳಿ ದಾಖಲಾಗಿದೆ. ವಿಡಿಯೋದಲ್ಲಿರುವಂತೆ ಅಕ್ಕ-ತಮ್ಮ ಇಬ್ಬರು ಲಿಫ್ಟ್​ ಒಳಗೆ ಪ್ರವೇಶ ನೀಡಿ ಹೊರಡುವಾಗ ಲಿಫ್ಟ್​ ಡೋರ್​ ನಡುವೆ ಸಿಲುಕಿದ ಟಾಯ್​ ರೋಪ್​ಗೆ ತಮ್ಮನ ಕತ್ತು ಸಿಲುಕಿ ನೇತಾಡುತ್ತಾನೆ. ತಕ್ಷಣ ಆತನನ್ನು ಗಮನಿಸಿದ ಸಹೋದರಿ, ಅವನ ಉಸಿರುಗಟ್ಟದಂತೆ ಮೇಲಕ್ಕೆ ಎತ್ತಿಡಿದು ಎಮರ್ಜೆನ್ಸಿ ಬಟನ್​ ಪ್ರೆಸ್​ ಮಾಡಿ ರೋಪ್​ ಅನ್ನು ಹೊರತೆಗೆದು ಜೀವ ಉಳಿಸುತ್ತಾಳೆ.

ಸ್ಥಳೀಯ ವರದಿಗಾರರ ಪ್ರಕಾರ ಘಟನೆಯ ಬಳಿಕ ಬಾಲಕ ಶೀಘ್ರವೇ ಚೇತರಿಸಿಕೊಂಡಿದ್ದು, ಆರಾಮಾಗಿರುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದ್ದು, ಇದುವರೆಗೂ 35 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್​​ ಮಾಡಿದ್ದು, 500 ಕ್ಕೂ ಹೆಚ್ಚು ಮಂದಿ ರೀಟ್ವೀಟ್​ ಮಾಡಿದ್ದಾರೆ.

ವಿಡಿಯೋ ನೋಡಿದ ಹಲವರು ಸಹೋದರಿಯ ಸಮಯಪ್ರಜ್ಞೆಯನ್ನು ಕಂಡು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ. ಅಲ್ಲದೆ, ಅಂತಹ ಪರಿಸ್ಥಿತಿಯಲ್ಲೂ ಧೃತಿಗೆಡದೆ ಶಾಂತ ರೀತಿಯಲ್ಲಿ ನಿರ್ವಹಣೆ ಮಾಡಿದಕ್ಕೆ ಆಕೆಗೆ ಬಹುತೇಕ ನೆಟ್ಟಿಗರು ಶಹಬ್ಬಾಸ್​ಗಿರಿ ನೀಡಿದ್ದಾರೆ.

Comments are closed.