ಬಿಹಾರದ ಯುವಕನೋರ್ವ ಬಾಲ್ಯದಿಂದಲೆ ಪೈಲಟ್ ಆಗಬೇಕೆಂಬ ಕನಸುಕಂಡಿದ್ದ. ಬಡತನದಿಂದಾಗಿ ಆತನ ಕನಸು ನನಸಾಗಲಿಲ್ಲ. ಆದರೆ ತನ್ನ ಕನಸನ್ನು ನನಸು ಮಾಡಲು ಕಾರೊಂದನ್ನು ಹೆಲಿಕಾಪ್ಟರನ್ನಾಗಿ ಬದಲಾಯಿಸಿದ್ದಾನೆ. ಈತನ ಪರಿಶ್ರಮದಿಂದ ನಿರ್ಮಿಸಿದ ಹೆಲಿಕಾಪ್ಟರ್ ಕಾರು ಇದೀಗ ವಿಶ್ವದ ಗಮನ ಸೆಳೆದಿದೆ.
ಬಿಹಾರದ ಛಾಪ್ರಾ ಮೂಲದ ಮಿಥಿಲೇಸ್ ಪ್ರಸಾದ್ ನ್ಯಾನೋ ಕಾರೊಂದನ್ನು ಖರೀದಿಸಿ ಅದನ್ನು ಹೆಲಿಕಾಪ್ಟರ್ನಂತೆ ರೂಪಕೊಟ್ಟಿದ್ದಾರೆ. ಕಾರಿನ ಹಿಂಭಾಗದಲ್ಲೂ ಮತ್ತು ಮೇಲ್ಭಾಗದಲ್ಲಿ ರೆಕ್ಕೆಯನ್ನು ಜೋಡಿಸಿದ್ದಾರೆ. ಸದ್ಯ ಮಿಥಿಲೇಶ್ ತಯಾರಿಸಿದ ಹೆಲಿಕಾಪ್ಟರ್ ಕಾರಿನ ವಿಡಿಯೋ ಯ್ಯೂಟೂಬ್ ಚಾನೆಲ್ನಲ್ಲಿ ಭಾರಿ ವೈರಲ್ ಆಗುತ್ತಿದೆ. ಈತನ ವಿಭಿನ್ನ ಪ್ರಯತ್ನಕ್ಕೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಈ ಹೆಲಿಕಾಪ್ಟರ್ ಕಾರು ಹಾರುವುದಿಲ್ಲ, ಬದಲಾಗಿ ರಸ್ತೆ ಮೇಲೆ ಚಲಿಸುತ್ತದೆ.
Comments are closed.