ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಡಿಸ್ಕವರಿ ಚಾನೆಲ್ನ ಹೆಸರುವಾಸಿ ಕಾರ್ಯಕ್ರಮ ‘ಮ್ಯಾನ್ ವರ್ಸಸ್ ವೈಲ್ಡ್’ ದಲ್ಲಿ ಕಾರ್ಯಕ್ರಮ ನಿರೂಪಕ ಎಡ್ವರ್ಡ್ ಮೈಕಲ್ ಗ್ರಿಲ್ಸ್ (ಬೇರ್ ಗ್ರಿಲ್ಸ್) ಜತೆ ಭಾಗಿಯಾಗಿರುವ ವಿಶೇಷ ಸಂಚಿಕೆ ಇಂದು ರಾತ್ರಿ 9 ಗಂಟೆಗೆ ಡಿಸ್ಕವರಿಯ ಒಟ್ಟು 12 ಚಾನೆಲ್ಗಳಲ್ಲಿ ಪ್ರಸಾರವಾಗಲಿದೆ.
ಈ ಬಗ್ಗೆ ಎಡ್ವರ್ಡ್ ಬೇರ್ ಗ್ರಿಲ್ಸ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಟ್ವೀಟ್ ಮಾಡಿ ತಪ್ಪದೆ ಕಾರ್ಯಕ್ರಮ ವೀಕ್ಷಿಸಿ ಎಂದು ಮನವಿ ಮಾಡಿದ್ದಾರೆ.
ಮ್ಯಾನ್ ವರ್ಸಸ್ ವೈಲ್ಡ್ನಲ್ಲಿ ಪ್ರಧಾನಿ ಮೋದಿಯವರ ಜತೆಗಿನ ನನ್ನ ಪಯಣದ ವಿಶೇಷ ಕಾರ್ಯಕ್ರಮ ಇಂದು ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗಲಿದೆ. ನಾವೆಲ್ಲರೂ ಒಟ್ಟಾಗಿ ಈ ಭೂಮಿ, ಪರಿಸರದ ರಕ್ಷಣೆ ಮಾಡೋಣ. ಶಾಂತಿಯನ್ನು ಸ್ಥಾಪಿಸೋಣ. ಹಾಗೇ ನಮ್ಮ ಕನಸುಗಳನ್ನು ಬೆನ್ನತ್ತಬೇಕು. ಯಾವತ್ತೂ ಪ್ರಯತ್ನವನ್ನು ಬಿಡಬಾರದು ಎಂಬ ಚೈತನ್ಯವನ್ನು ಹೆಚ್ಚೆಚ್ಚು ಪ್ರೋತ್ಸಾಹಿಸೋಣ. ಇವತ್ತಿನ ಕಾರ್ಯಕ್ರಮವನ್ನು ಎಂಜಾಯ್ ಮಾಡಿ ಎಂದು ಬೇರ್ ಗ್ರಿಲ್ಸ್ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ನ್ನು ರೀಟ್ವೀಟ್ ಮಾಡಿರುವ ನರೇಂದ್ರ ಮೋದಿಯವರು, ಭಾರತದ ಹಚ್ಚ ಹಸಿರಿನ ಕಾಡುಗಳಿಗಿಂತಲೂ ಉತ್ತಮವಾದುದು ಏನಿದೆ? ಪ್ರಕೃತಿಯ ಮಧ್ಯದಲ್ಲೇ ಸಂಚರಿಸುತ್ತಾ ಪರಿಸರ ಸಂರಕ್ಷಣೆ ಮತ್ತು ಬದಲಾಗುತ್ತಿರುವ ಹವಾಮಾನಕ್ಕೆ ಸಂಬಂಧಪಟ್ಟ ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಈ ಕಾರ್ಯಕ್ರಮದಲ್ಲಿ ಮಾಡಲಾಗಿದೆ. ಇಂದು ರಾತ್ರಿ 9 ಗಂಟೆಗೆ ನಮಗೆ ನೀವೂ ಜತೆಯಾಗಿ ಎಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉತ್ತರಾಖಂಡದ ಜಿಮ್ ಕಾರ್ಬೆಟ್ ಮತ್ತು ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನಗಳಲ್ಲಿ ಈ ಕಾರ್ಯಕ್ರಮದ ಚಿತ್ರೀಕರಣ ನಡೆದಿದೆ. ‘ಮ್ಯಾನ್ ವರ್ಸಸ್ ವೈಲ್ಡ್’ ಪ್ರಚಾರ ವಿಡಿಯೋ ತುಣುಕನ್ನು (ಟೀಸರ್) ಕೇಂದ್ರ ಪ್ರವಾಸೋದ್ಯಮ ಇಲಾಖೆ ‘ಇನ್ಕ್ರೆಡಿಬಲ್ ಇಂಡಿಯಾ’ ವೆಬ್ಸೈಟ್ನಲ್ಲಿ ಹಾಕಿದ್ದು, ಪ್ರಧಾನಿ ಮೋದಿ ಪ್ರವಾಸೋದ್ಯಮದ ಬಹುದೊಡ್ಡ ರಾಯಭಾರಿ ಎಂದು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದ್ದಾರೆ.
Comments are closed.