ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗಣೇಶ ವಿಸರ್ಜನೆ ವೇಳೆಯಲ್ಲಿ ಮಳೆಯನ್ನು ಲೆಕ್ಕಿಸದೆ ಕುಣಿದು ಕುಪ್ಪಳಿಸಿದ್ದಾರೆ. ಸಲ್ಮಾನ್ ಖಾನ್ ಅವರ ಭರ್ಜರಿ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://twitter.com/iSKsCombatant/status/1169110586313101317
ಪ್ರತಿವರ್ಷದಂತೆ ಈ ಬಾರಿಯೂ ಸಹೋದರಿ ಅರ್ಪಿತಾ ಖಾನ್ ಭಾವ ಆಯುಷ್ ಶರ್ಮಾ ಅವರು ಗಣೇಶ ಹಬ್ಬದ ಮೂರನೇ ದಿನ ಹಮ್ಮಿಕೊಂಡಿದ್ದ ಮೂರ್ತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಲ್ಮಾನ್ ಖಾನ್, ಸೋದರಳಿಯ ಅಹಿಲ್ ಶರ್ಮಾ ಜೊತೆಗೆ ಗಣಪತಿ ಮೂರ್ತಿಗೆ ಆರತಿ ಬೆಳಗಿ ವಿಸರ್ಜನೆ ವೇಳೆ ಕುಣಿದು ಕುಪ್ಪಳಿಸಿದ್ದಾರೆ.
ಸಂಗೀತದ ಹಿಮ್ಮೇಳನಕ್ಕೆ ತಕ್ಕಂತೆ ಕೆಸರಿನಲ್ಲಿಯೂ ಬಿಂದಾಸ್ ಸ್ಟೆಪ್ ಹಾಕಿದ್ದಾರೆ. ಸಲ್ಮಾನ್ ಖಾನ್ ಜೊತೆಗೆ ನಟಿ ಸ್ವರಾ ಭಾಸ್ಕರ್ ಹಾಗೂ ಡೈಸಿ ಷಾ, ಅರ್ಪಿತಾ ಖಾನ್ ಸಖತ್ ಸ್ಟೆಪ್ ಹಾಕಿದ್ದಾರೆ.
Comments are closed.