ಕರಾವಳಿ

ಕುಂದಾಪುರದಲ್ಲಿ ಜಿಟಿಜಿಟಿ ಮಳೆ ನಡುವೆ ಅಲ್ಲಲ್ಲಿ ಒಗೆ ಮೀನು ಶಿಕಾರಿ..!(Video)

Pinterest LinkedIn Tumblr

ಕುಂದಾಪುರ: ಕಳೆದೊಂದು ವಾರದಿಂದ ಮುಂಗಾರು ಮಳೆ ಬಿರುಸುಗೊಂಡಿದ್ದು ಗ್ರಾಮೀಣ ಪ್ರದೇಶದಲ್ಲಿ ಒಗೆ ಮೀನು (ಉಬೇರ್ ಮೀನು) ಹಿಡಿಯುವ ಚಟುವಟಿಕೆ ಬಿರುಸುಗೊಳ್ಳುತ್ತದೆ.

ರಾತ್ರಿ ಸಮುಯದಲ್ಲೇ ನಡೆಯುವ ಈ ಚಟುವಟಿಕೆ ರೋಮಾಂಚನಕಾರಿಯೂ ಆಗಿದೆ. ಮಳೆ ರಭಸಗೊಳ್ಳುತ್ತಿದ್ದಂತೆ ಬಯಲು, ತೋಡು, ಕೆರೆಗಳು ತುಂಬಿ ಹರಿಯುತ್ತವೆ. ಹರಿಯುವ ನೀರಿನ ರಭಸಕ್ಕೆ ನದಿ ಪ್ರದೇಶಗಳಿಂದ ಮೀನುಗಳು ಕಡಿಮೆ ನೀರಿನಾಶ್ರಯವಿರುವ ಬಯಲು ಗದ್ದೆ ಪ್ರದೇಶಕ್ಕೆ ಬರುತ್ತವೆ. ನದಿ ಭಾಗದಿಂದ ಮೀನುಗಳು ಬಯಲು ಪ್ರದೇಶಕ್ಕೆ ಹಿಂಡು ಹಿಂಡಾಗಿ ಬರುವುದನ್ನು ತುಳುವಿನಲ್ಲಿ ‘ಉಬೇರ್ ಮೀನ್’ ಎಂದು ಕರೆದರೆ, ಕುಂದಾಪುರ ಗ್ರಾಮೀಣ ಭಾಗದಲ್ಲಿ ಒಗೆ ಮೀನು ಎನ್ನುತ್ತಾರೆ.

ತುಂತುರು ಮಳೆಯಲ್ಲಿ ಕೆಲವರು ರಾತ್ರಿ ಹೊರಟವರು ಮಧ್ಯರಾತ್ರಿವರೆಗೂ ಶಿಕಾರಿಯಲ್ಲಿ ತಲ್ಲೀನರಾಗುತ್ತಾರೆ. ಕರಸಿ, ಕೋಂತಿ, ಶಾಡಿ, ಬಾಳೆ, ಐರ್, ಏಡಿ ಸೇರಿದಂತೆ ವಿವಿಧ ಜಾತಿಯ ಮೀನುಗಳು ಸಿಗುತ್ತವೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.