ಕರಾವಳಿ

ಸುಬ್ರಹ್ಮಣ್ಯದ ಪುಟಾಣಿ ಅಭಿನಯಕ್ಕೆ ಫಿದಾ ಆದ ಪುನೀತ್ ರಾಜ್ ಕುಮಾರ್ ಹೇಳಿದ್ದೇನು? (ವಿಡೀಯೋ ವರದಿ)

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.13: ದ.ಕ.ಜಿಲ್ಲೆಯ ನನ್ನ ಸ್ನೇಹಿತರಾದ ಜೋಗಿ ಎಂಬವರು (ಪತ್ರಕರ್ತರು) ನನಗೆ ಇಂದು ಬೆಳಗ್ಗೆ ಒಂದು ವಿಡೀಯೋ ಕಳಿಸಿದ್ದರು. ಅದರಲ್ಲಿ ಓರ್ವ ನಾಲ್ಕು ವರ್ಷದ ಪುಟ್ಟ ಬಾಲಕ ಆತನ ಹೆಸರು ಆಕಾಶ್ ಭಟ್ ಎಂದು ಈತ ತನ್ನ ತಂದೆಯವರ ಅಭಿನಯದ ಹೆಸರಾಂತ ಚಿತ್ರ ಬಬ್ರು ವಾಹನದ ಡೈಲಾಗ್ ಹಾಗೂ ಮೂರು ಲೈನ್ ಹಾಡನ್ನು ಹಾಡಿರುತ್ತಾನೆ. ಇದನ್ನು ನೋಡಿ ನನಗೆ ಎಷ್ಟು ಖುಶಿಯಾಗಿದೆ ಎಂದರೆ ನನ್ನ ತಂದೆಯ ಅಭಿನಯದ ಡೈಲಾಗು ಹಾಗೂ ಹಾಡನ್ನು ಓರ್ವ ಚಿಕ್ಕ ಬಾಲಕ ಮಾಡಿರುವುದು ನಿಜವಾಗಿಯೂ ಅದ್ಭುತ. ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು ಅಭಿಮಾನಿ ದೇವರುಗಳು ಎಂದು, ಅದು ನಿಜನೆ. ಈ ಪುಟ್ಟ ಅಭಿಮಾನಿ ದೇವರಿಗೆ ನನ್ನ ವಂದನೆಗಳು.

ಈ ಮಾತನ್ನು ಹೇಳಿದ್ದು ಬೇರೆ ಯಾರೂ ಅಲ್ಲ. ಕನ್ನಡದ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರು.

ಸುಬ್ರಹ್ಮಣ್ಯ ಸಮೀಪದ ಪಂಜದ ಉದ್ಯಮಿ ವೆಂಕಟ್ರಮಣ ಭಟ್ ಹಾಗೂ ಶಶಿಕಲಾ ದಂಪತಿಯ ಪುತ್ರ, ಬೆಂಗಳೂರಿನಲ್ಲಿ ಇಂಜಿನಿಯರ್ ಗಳಾಗಿರುವ ಆದಿತ್ಯ ಹಾಗೂ ಪೂನಂ ದಂಪತಿಯ ಪುತ್ರ ನಾಲ್ಕು ವರ್ಷದ ಆಕಾಶ್ ಭಟ್ ಅವರ ಬಬ್ರು ವಾಹನ ಚಿತ್ರದ ಅಭಿನಯದ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ವೀಡಿಯೊ ನೋಡಿ ಪುಟಾಣಿಯ ಅಭಿನಯಕ್ಕೆ ಚಿತ್ರ ನಟ ಪುನೀತ್ ರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ, ಬಾಲಕನನ್ನು ಪ್ರೋತ್ಸಾಹಿಸಿ, ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲದೇ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಫೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಡಾ. ರಾಜ್‌ಕುಮಾರ್ ಅಭಿನಯದ ಬಬ್ರುವಾಹನ ಚಿತ್ರದ ಸನ್ನಿವೇಶದ ಸಂಭಾಷಣೆಯನ್ನುಅಭಿನಯಿಸಿದ ವೀಡಿಯೋವನ್ನು ಹೆತ್ತವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಾಕಿದ್ದರು. ಇದನ್ನು ಪತ್ರಕರ್ತ ಜೋಗಿ ಅವರು ಪುನೀತ್‌ ರಾಜ್‌ಕುಮಾರ್ ಅವರಿಗೆ ಕಳುಹಿಸಿದ್ದರು.

Comments are closed.