ರಾಷ್ಟ್ರೀಯ

ಕಾರು ನಿಲ್ಲಿಸಲು ಹೋದ ಪೊಲೀಸ್​ ಪೇದೆಯನ್ನೇ ಕಾರಿನ ಬಾನೆಟ್​ ಮೇಲೆಯೇ ಎಳೆದೊಯ್ದ ಚಾಲಕ ! ಈ ಭಯಾನಕ ವೀಡಿಯೊ ನೋಡಿ…

Pinterest LinkedIn Tumblr

ನವದೆಹಲಿ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯೋರ್ವ ಕಾರನ್ನು ನಿಲ್ಲಿಸಲು ಹೋದ ಪೊಲೀಸ್​ ಪೇದೆಯನ್ನೇ ಕಾರಿನ ಬಾನೆಟ್​ ಮೇಲೆಯೇ ಸುಮಾರು 400 ಮೀಟರ್ ದೂರದ ವರೆಗೆ ಎಳೆದೊಯ್ದಿರುವ ಘಟನೆ ರಾಷ್ಟ್ರ ರಾಜಧಾನಿಯ ಧೌಲಾ ಕುವಾನ್ ನಲ್ಲಿ ನಡೆದಿದೆ.

ನಿಯಮ ಉಲ್ಲಂಘಿಸಿದ ಕಾರನ್ನು ತಡೆಯಲು ಯತ್ನಿಸಿದ ಸಂಚಾರಿ ಪೊಲೀಸ್ ನನ್ನು ಕೆಲ ಮೀಟರ್ ಗಳ ವರೆಗೂ ಕಾರಿನ ಬಾನೆಟ್ ಮೇಲೆಯೇ ಎಳೆದೊಯ್ದುಲಾಗಿದೆ. ನಂತರ ಪೊಲೀಸ್ ಕಾರಿನಿಂದ ಕೆಳಗಡೆ ಬಿದಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೆಳಗೆ ಬಿದ್ದ ಟ್ರಾಫಿಕ್ ಪೊಲೀಸ್​ ಕಾಲು ಕಾರಿನ ಚಕ್ರದಲ್ಲಿ ಸಿಲುಕುವುದರಿಂದ ಸ್ವಲ್ಪದರಲ್ಲೇ ಪಾರಾಗಿರುವುದು ಈ ದೃಶ್ಯದಲ್ಲಿ ದಾಖಲಾಗಿದೆ. ಕಳೆದ ಸೋಮವಾರ ದಕ್ಷಿಣ ದೆಹಲಿಯ ಧೌಲಾ ಕುವಾನ್​ ಎಂಬಲ್ಲಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಿಸಿಟಿವಿ ಕ್ಯಾಮೆರಾದ ವೀಡಿಯೊದಲ್ಲಿ, ಕಾನ್‌ಸ್ಟೆಬಲ್ ಮಹಿಪಾಲ್ ಸಿಂಗ್ ಹ್ಯಾಚ್‌ಬ್ಯಾಕ್ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ. ವರದಿಯ ಪ್ರಕಾರ, ಅಲಂಕಾರಿಕ ನಂಬರ್‌ಪ್ಲೇಟ್ ಬಳಸುವುದನ್ನು ದೆಹಲಿಯಲ್ಲಿ ನಿಷೇಧಿಸಲಾಗಿದೆ. ಆದರೂ ಕಾರಿನ ಚಾಲಕ ಅಲಂಕಾರಿಕ ನಂಬರ್​ ಪ್ಲೇಟ್​ ಅನ್ನು ತನ್ನ ಕಾರಿಗೆ ಅಳವಡಿಸಿದ್ದಾನೆ. ಅಲ್ಲದೆ, ಜನನಿಬಿಡ ಪ್ರದೇಶದಲ್ಲಿ ವೇಗವಾಗಿ ವಾಹನ ಚಲಾಯಿಸಿದ್ದಾನೆ. ಈ ವೇಳೆ ಕಾರನ್ನು ನಿಲ್ಲಿಸಲು ಮುಂದಾದ ಟ್ರಾಫಿಕ್ ಪೊಲೀಸ್​ಚಾಲಕ ವಾಹನವನ್ನು ನಿಲ್ಲಿಸದಿದ್ದಾಗ ಕಾರಿನ ಬಾನೆಟ್​ ಮೇಲೆ ಹಾರಿದ್ದಾರೆ.

ಚಾಲಕ ವಾಹನವನ್ನು ಜಿಗ್​-ಜಾಗ್​ ಆಗಿ ಓಡಿಸಿದರೂ ಪೊಲೀಸ್ ಸಿಬ್ಬಂದಿ ಅವನ ಹಿಡಿತವನ್ನು ಬಿಡುವುದಿಲ್ಲ. ವಾಹನವನ್ನು ಸುಮಾರು 400 ಮೀಟರ್ ಓಡಿಸಿದ ನಂತರ ಪೊಲೀಸ್​ ಪೇದೆ ಕೊನೆಗೂ ಆಯತಪ್ಪಿ ಕೆಳಕ್ಕೆ ಬೀಳುವ ದೃಶ್ಯ ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದೆ.

ಆದರೆ, ಘಟನೆಯ ನಂತರ ಒಂದು ಕಿಲೋಮೀಟರ್ ಬೆನ್ನಟ್ಟಿ ಕೊನೆಗೂ ಕಾರಿನ ಚಾಲಕನನ್ನು ಬಂಧಿಸಲಾಗಿದೆ. ಆರೋಪಿ ನೈರುತ್ಯ ದೆಹಲಿಯ ಉತ್ತಮ್ ನಗರ ನಿವಾಸಿ ಶುಭಮ್ ಎಂದು ಗುರುತಿಸಲಾಗಿದೆ. ಚಾಲನೆಗೆ ಅಡ್ಡಿಯುಂಟುಮಾಡುವುದು, ನೋಯಿಸುವುದು ಮತ್ತು ತಪ್ಪಾಗಿ ವಾಹನ ಚಲಾಯಿಸಿದ ಆರೋಪದ ಮೇಲೆ ಪೊಲೀಸರು ಶುಭಮ್‌ನನ್ನು ಬಂಧಿಸಿದ್ದಾರೆ.

Comments are closed.