ವ್ಯಕ್ತಿಯೋರ್ವ ಹಕ್ಕಿಯನ್ನು ಭೇಟೆ ಆಡಲು ಹೊಡೆದ ಗುಂಡು ಹಕ್ಕಿಗೆ ಬಿತ್ತಾದರೂ ಹಕ್ಕಿ ಮುಂದೆ ಮಾಡಿದ್ದೆ ಬೇರೆ. ಅದೇನು ಅಂತ ಮುಂದೆ ನೋಡಿ…
ಹಕ್ಕಿಗಳು ಆಗಸದಲ್ಲಿ ಹಾರುವುದನ್ನು ನೋಡುವುದೇ ಒಂದು ಚೆಂದ. ಆದರೆ ಇಲ್ಲೊಬ್ಬ ವ್ಯಕ್ತಿ ಸ್ವಚ್ಛಂದವಾಗಿ ಹಾರುವ ಹಕ್ಕಿಯೊಂದನ್ನು ಕಂಡು ತನ್ನ ಕೈಯಲ್ಲಿದ್ದ ಕೋವಿಯಿಂದ ಗುರಿಯಾಗಿಸಿ ಹೊಡೆದಿದ್ದಾನೆ. ವ್ಯಕ್ತಿ ನೇರವಾಗಿ ಹಕ್ಕಿಯನ್ನು ನೆಲಕ್ಕೆ ಬೀಳಿಸಬೇಕು ಎಂದುಕೊಂಡು ಗುಂಡು ಹಾರಿಸುತ್ತಾನೆ. ಗುಂಡು ಹಾರಿಸಿದಂತೆ ಹಕ್ಕಿ ನೆಲಕ್ಕೆ ಅಪ್ಪಳಿದಂತೆ ಕಾಣಿಸುತ್ತದೆ. ಮಾತ್ರವಲ್ಲದೆ ಅಲ್ಲಿದ್ದವರು ಕೂಡ ಹಾಗೆಯೇ ಅಂದುಕೊಳ್ಳುತ್ತಾರೆ. ಆದರೆ ಹಾಗಾಗಲಿಲ್ಲ. ಆಗಿದ್ದೇ ಬೇರೆ!.
Karma 🙏 pic.twitter.com/8gk0VuQpgb
— Susanta Nanda IFS (@susantananda3) January 30, 2021
ಹೊಡೆದ ಗುಂಡೇಟಿಗೆ ಗಾಯವಾದ ಹಕ್ಕಿ ವೇಗವಾಗಿ ಆತನ ಬಳಿ ಬಂದಿದೆ. ನೇರವಾಗಿ ಬಂದು ಆತನ ಕಣ್ಣು ಕುಕ್ಕಿದೆ. ಅರೆ ಘಳಿಗೆಯಲ್ಲಿ ವ್ಯಕ್ತಿಯ ತಾನು ಮಾಡಿದ ಕರ್ಮಕ್ಕೆ ಘಲ ಅನುಭವಿಸಿದ್ದಾನೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನೇಕರು ಕರ್ಮ ಮತ್ತೆ ಹಿಂತಿರುಗಿ ಆತನನ್ನು ತಟ್ಟಿದೆ ಎಂದು ಕಾಮೆಂಟ್ ಬರೆಯುತ್ತಿದ್ದಾರೆ.
ಅಂದಹಾಗೆಯೇ ಆರು ಸೆಕೆಂಡುಗಳ ವಿಡಿಯೋ ಇದಾಗಿದ್ದು, ಅರಣ್ಯ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಸುಸಾಂತ್ ನಂದ ಅವರು ತಮ್ಮ ಟ್ವಿಟ್ಟರ್ ಖಾಖೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Comments are closed.