ಕೊಲಂಬಿಯಾ: ಲೈವ್ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ನಿರೂಪಕರೊಬ್ಬರ ಮೇಲೆ ಬೃಹತ್ ಟಿವಿ ಸೆಟ್ ಬಿದ್ದ ಘಟನೆಯೊಂದು ನಡೆದಿದೆ.
ಖ್ಯಾತ ಕ್ರೀಡಾ ವಾಹಿನಿ ಇಎಸ್ ಪಿಎನ್ ನ ಕೊಲಂಬಿಯಾದಲ್ಲಿರುವ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದ್ದು, ಫುಟ್ಬಾಲ್ ಸಂಬಂಧಿ ಪ್ಯಾನಲ್ ಡಿಸ್ಕಷನ್ ಕಾರ್ಯಕ್ರಮ ನಡೆಯುತ್ತಿದ್ದಾಗ ನಿರೂಪಕ ಹಿಂಬದಿಯಲ್ಲಿದ್ದ ಬೃಹತ್ ಟಿವಿ ಆತನ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ನಿರೂಪಕ ತನ್ನ ಮುಂದಿನ ಟೇಬಲ್ ಗೆ ಅಪ್ಪಳಿಸಿದ್ದಾನೆ. ಮತ್ತೊಂದೆಡೆ ಈ ದಿಢೀರ್ ಘಟನೆಯಿಂದಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ಮತ್ತು ಸಹ ನಿರೂಪಕ ತಬ್ಬಿಬ್ಬಾದರು.
Shocking video. ESPN anchor crushed live on the air by falling set piece. Thankfully he was uninjured. pic.twitter.com/CeFxy8AksY
— Mike Sington (@MikeSington) March 10, 2021
ಕೂಡಲೇ ಕ್ಯಾಮೆರಾಗಳು ಆನ್ ಇರುವುದನ್ನು ಎಚ್ಚೆತ್ತುಕೊಂಡ ಸಹ ನಿರೂಪಕ ಕಾರ್ಯಕ್ರಮ ಮುಂದುವರೆಸಿ ವೃತ್ತಿಪರತೆ ಮೆರೆದಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ಘಟನೆಯಲ್ಲಿ ಗಾಯಗೊಂಡ ನಿರೂಪಕನನ್ನು ಕಾರ್ಲೋಸ್ ಒರ್ಡುಜ್ ಎಂದು ಗುರುತಿಸಲಾಗಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಕಾರ್ಲೋಸ್ ಗೆ ಯಾವುದೇ ರೀತಿಯ ಗಂಭೀರ ಪೆಟ್ಟಾಗಿಲ್ಲ, ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಿವಿ ಬಿದ್ದ ರಭಸಕ್ಕೆ ಕಾರ್ಲೋಸ್ ಮೂಗಿಗೆ ಕೊಂಚ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಕಾರ್ಲೋಸ್ ಮಾಹಿತಿ ನೀಡಿದ್ದು, ನನಗೆ ಯಾವುದೇ ರೀತಿಯ ಅಪಾಯವಾಗಿಲ್ಲ. ಮೂಗಿಗೆ ಪೆಟ್ಟಾಗಿತ್ತು. ಹೀಗಾಗಿ ಪರೀಕ್ಷೆ ನಡೆಸಿದಾಗ ಯಾವುದೇ ರೀತಿಯ ಮೂಳೆ ಮುರಿತವಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ನನಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ.
Comments are closed.