ಕರಾವಳಿ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್’ಗೆ ಪೆನ್ ನೀಡಿ ವಿನಯ್ ಗುರೂಜಿ ಹೇಳಿದ್ದೇನು? (Video)

Pinterest LinkedIn Tumblr

ಉಡುಪಿ: ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಆಶೀರ್ವದಿಸಿ ಪೆನ್ ನೀಡಿದ ಅವದೂತ ವಿನಯ್ ಗುರೂಜಿ ಹೇಳಿದ್ದೇನು ಎಂಬುದು ಇದೀಗಾ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಕೋಟದಲ್ಲಿ ಶನಿವಾರ ನಡೆದ ಹೊಳಪು‌ ಕಾರ್ಯಕ್ರಮದಲ್ಲಿ ವಿನಯ್ ಗುರೂಜಿ ಉಪಸ್ಥಿತರಿದ್ದು ಅವರ ಬಳಿ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ನಳೀನ್ ಕುಮಾರ್ ಕಟಿಲ್ ಕೂಡ ಇದ್ದರು. ಆ ಸಂದರ್ಭ ವ್ಯಕ್ತಿಯೋರ್ವ ನಳಿನ್ ಗೆ ಪೆನ್ ಕೊಡ್ತಾರೆ.‌ ಆ ಪೆನ್ ಜೇಬಿಗೆ ಹಾಕಲು ಹೊರಟಾಗ ಆ‌ ಪೆನ್ ತನಗೆ ಕೊಡಲು ಕೇಳಿ ಪಡೆದ ವಿನಯ್ ಗುರೂಜಿ ಅದನ್ನು ಕೈಯಲ್ಲಿ ಹಿಡಿದು ಆಶೀರ್ವದಿಸಿ ವಾಪಾಸ್ ನಳಿನ್ ಅವರಿಗೆ ನೀಡಿ ಏನೋ ಹೇಳ್ತಾರೆ. ಆ ಆಶೀರ್ವಾದ ಏನೆಂಬುದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ. ನಳೀನ್ ಕುಮಾರ್ ಕಟೀಲ್ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿ ಈ ಪೆನ್ ನೀಡಿದ್ದು ಅದನ್ನು ಕಳೆದುಕೊಳ್ಳಬೇಡಿ ಎಂದು ವಿನಯ್ ಗುರೂಜಿ ನಳೀನ್ ಅವರಿಗೆ ತಿಳಿಸಿದ್ದಾರೆಂದು ತಿಳಿದುಬಂದಿದೆ.

ಇನ್ನು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ..? ರಾಜ್ಯ ಪದಾಧಿಕಾರಿಗಳ ಬದಲಾವಣೆಗೆ ಕೇಂದ್ರ ಚಿಂತನೆ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ನಳೀನ್ ಕುಮಾರ್ ಕಟೀಲ್ ನಿರಾಕರಿಸಿದ್ದಾರೆ. ನಮಗೆ ಕೇಂದ್ರದಿಂದ ಯಾವುದೇ ಸೂಚನೆ ಬಂದಿಲ್ಲ. ನಾವು ಉಪಚುನಾವಣೆಯ ತಯಾರಿಯಲ್ಲಿ ಇದ್ದೇವೆ. ನಮ್ಮ ಗುರಿ ಉಪಚುನಾವಣೆ ಗೆಲ್ಲುವುದಷ್ಟೇ ಎಂದು ಕುಂದಾಪುರದ ಕೋಟದಲ್ಲಿ ನಳೀನ್ ಕುಮಾರ್ ಕಟೀಲ್ ಮಾಧ್ಯಮಕ್ಕೆ ಹೇಳಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.