ಕರಾವಳಿ

ಮಲ್ಪೆ ತೊಟ್ಟಂ‌ ಸಮುದ್ರದಲ್ಲಿ ಕೈರಂಪಣಿ ಬಲೆಗೆ ಬಿದ್ದ ರಾಶಿಗಟ್ಟಲೆ ‘ಪಾಂಪ್ರೆಟ್’ ಮೀನುಗಳು..! (Video)

Pinterest LinkedIn Tumblr

ಉಡುಪಿ: ಜಿಲ್ಲೆಯ‌ ಮಲ್ಪೆ ಸಮೀಪದ ತೊಟ್ಟಂ ಬಳಿ ಕೈರಂಪಣಿ ನಾಡದೋಣಿಯೊಂದರ ಬಲೆಗೆ ರಾಶಿಗಟ್ಟಲೆ ಬಿಳಿ ಪಾಂಪ್ರೆಟ್‌ (ಮಾಂಜಿ) ಮೀನು ಬಿದ್ದಿದೆ.

ಶುಕ್ರವಾರ ಬೆಳಗ್ಗೆ 40 ಜನರ ತಂಡ ಸಮುದ್ರ ತೀರದಲ್ಲಿ ಕೈರಂಪಣಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಗೆ ಭಾರೀ ಪ್ರಮಾಣದ ಪಾಂಪ್ರಟ್‌ ಮೀನು ದೊರೆತಿದ್ದು ಮೀನುಗಾರರ ಮೊಗದಲ್ಲಿ ಸಂತಸ ಮೂಡಿಸಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್‌ ಆಗಿದೆ.

ಸಮುದ್ರದ ತೆರೆಯೊಡನೆ ಸಾಗಿ ಬಂದ ಪಾಂಪ್ರೆಟ್ ಮೀನು ಕೈರಂಪಣಿ ಬಲೆಗೆ ಸಿಕ್ಕಿವೆ. ಒಂದು ಕೆ.ಜಿ.ಯಲ್ಲಿ 12ರಷ್ಟು ಮೀನು ಹಿಡಿಯುತ್ತಿದ್ದು, ಸುಮಾರು 1,300 ಕೆ.ಜಿ.ಗಳಷ್ಟು ಮೀನುಗಳು ದೊರೆತಿವೆ ಎನ್ನಲಾಗಿದೆ. ಈ‌ ಮೀನುಗಳು ಮಾರುಕಟ್ಟೆಯಲ್ಲಿ 350-400 ರೂ. ಬೆಲೆ ಇರಲಿದೆ. ಬಲೆಯಲ್ಲಿ ಪಾಂಪ್ರೆಟ್ ಮೀನುಗಳನ್ನು ಕಂಡೊಡನೆ ಮೀನುಗಾರರು ಖುಷಿಯಿಂದ ಕುಣಿದಾಡಿದ್ದಾರೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಮಲ್ಪೆ ತೊಟ್ಟಂ ಪರಿಸರದಲ್ಲಿ ಇಷ್ಟು ಪ್ರಮಾಣದ ಪಾಂಪ್ರಟ್‌ ಮೀನು ಇದುವರೆಗೂ ಸಮುದ್ರ ತೀರಕ್ಕೆ ಬಂದಿದ್ದಿಲ್ಲ ಎಂದು ಮೀನುಗಾರು ತಿಳಿಸಿದ್ದಾರೆ.

Comments are closed.