ಕರಾವಳಿ

ಕುಂದಾಪುರದಲ್ಲಿ ರಾಕಿಂಗ್ ಸ್ಟಾರ್ ಯಶ್ | ಯುವಕರೊಂದಿಗೆ ಕ್ರಿಕೆಟ್ ಆಟ | ಇಂದು ಆನೆಗುಡ್ಡೆ ವಿನಾಯಕನ ದರ್ಶನ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕುಂದಾಪುರ ತಾಲೂಕಿನ ಬಸ್ರೂರಿಗೆ ಆಗಮಿಸಿ ರಾಕಿಂಗ್ ಸ್ಟಾರ್ ಯಶ್ ಕಳೆದೆರಡು ದಿನದಿಂದ ಈ ಭಾಗದಲ್ಲೇ ಇದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಕೆಜಿಎಫ್-2ಗೆ ಅಂತಿಮ ಟಚ್ ಮ್ಯೂಸಿಕ್ ನೀಡುತ್ತಿದ್ದು ಈ ಹಿನ್ನೆಲೆ ಯಶ್ ಆಗಮಿಸಿದ್ದಾರೆ ಎನ್ನಲಾಗಿದೆ.

ಕ್ರಿಕೆಟ್ ಆಡಿದ ಯಶ್..
ಬಸ್ರೂರಿಗೆ ಆಗಮಿಸಿದ ಯಶ್ ಬಿಡುವಿನ‌ ವೇಳೆಯಲ್ಲಿ ಸ್ಥಳೀಯ ಯುವಕರ ಜತೆ ಕ್ರಿಕೆಟ್ ಆಡಿದ್ದಾರೆ. ರವಿ ಬಸ್ರೂರು ಅವರ ಮನೆ ಬಳಿ ಆಟದ ಮೈದಾನದಲ್ಲಿ ಹುಡುಗರೊಂದಿಗೆ ಕೆಲ ಹೊತ್ತು ಕ್ರಿಕೆಟ್ ಆಡಿ ಕಾಲ ಕಳೆದಿದ್ದಾರೆ. ಸದ್ಯ ಈ ವಿಡಿಯೋ ಬಾರೀ ವೈರಲ್ ಆಗಿದೆ.

ಇಂದು ಆನೆಗುಡ್ಡೆಗೆ ಭೇಟಿ
ಮಂಗಳವಾರ ಬೆಳಿಗ್ಗೆ ಯಶ್ ಆನೆಗುಡ್ಡೆ ಶ್ರೀ ವಿನಾಯಕ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಲಾಯಿತು.

Comments are closed.