ಕರಾವಳಿ

ವೆಬ್ ಇಂಡೆಂಟ್ ಜೊತೆಗೆ ಹಳೆ ಪದ್ಧತಿಯಂತೆ ಮದ್ಯ ಖರೀದಿಸಲು ಅವಕಾಶ ಕಲ್ಪಿಸಲು ವೈನ್ ಮರ್ಚೆಂಟ್ಸ್ ಆಗ್ರಹ (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಇದೇ ಎಪ್ರಿಲ್ ತಿಂಗಳಿನಿಂದ ವೆಬ್ ಇಂಡೆಂಟ್ ಮೂಲಕ ಮದ್ಯ ಖರೀದಿಸುವ ವ್ಯವಸ್ಥೆ ಜಾರಿಗೆ ಬಂದಿದ್ದು ಇದರಿಂದ ತುಂಬಾ ಸಮಸ್ಯೆಗಳು ಉಂಟಾಗಿದ್ದು ಸಾವಿರಾರು ಸನ್ನದುದಾರರು ತೊಂದರೆ ಅನುಭವಿಸುವಂತಾಗಿದೆ. ವೆಬ್–ಇಂಡೆಂಟ್ ಮೂಲಕ ಮಾತ್ರ ಮದ್ಯ ಖರೀದಿ ಮಾಡಬೇಕು ಎಂಬ ಹೊಸ ನಿಯಮವನ್ನು ಕರ್ನಾಟಕ ಪಾನೀಯ ನಿಗಮ (ಕೆಎಸ್‌ಬಿಸಿಎಲ್‌) ಜಾರಿಗೆ ತಂದಿದ್ದು, ಇದು ಮದ್ಯದಂಗಡಿ ಸನ್ನದುದಾರರಿಗೆ ತಲೆನೋವಾಗಿ ಪರಿಣಮಿಸಿದೆ. ಹೊಸ ವ್ಯವಸ್ಥೆಯಲ್ಲಿ ಮದ್ಯ ಖರೀದಿ ಮಾಡಲು ಸಾಧ್ಯವಾಗದೆ ಮದ್ಯದ ಅಂಗಡಿಗಳಲ್ಲಿ ದಾಸ್ತಾನು ಖಾಲಿಯಾಗಿವೆ.

ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯ ಮಾರಾಟಗಾರ ಅಸೋಸಿಯೇಶನ್ ಇಂದು ಪ್ರತಿಭಟನೆ ನಡೆಸಿದೆ. ಕುಂದಾಪುರದ ಕೋಟೇಶ್ವರ ಸಮೀಪವಿರುವ ಕೆ.ಎಸ್.ಬಿ.ಸಿ.ಎಲ್ ಡಿಪೋ ಕಚೇರಿ ಎದುರು ಕುಂದಾಪುರ ತಾಲೂಕು ವೈನ್ ಮರ್ಚಂಟ್ಸ್ ಅಸೋಸಿಯೇಶನ್ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.

ಈ ಒಂದು ತಿಂಗಳ ಮಟ್ಟಿಗಾದರೂ ಹಳೆ ವ್ಯವಸ್ಥೆ ಜಾರಿಯಲ್ಲಿಡಬೇಕು. ಸಣ್ಣ ಸಣ್ಣ ಬಾರ್ ಹಾಗೂ ವೈನ್ ಶಾಪ್ ಹೊಂದಿರುವವರಿಗೆ ಹೊಸ ವ್ಯವಸ್ಥೆಯಿಂದ ಸಮಸ್ಯೆಗಳಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಮದ್ಯ ಖರೀದಿಗೆ ತೊಡಕಾಗುತ್ತಿದೆ.‌ಕಳೆದ ನಾಲ್ಕೈದು ದಿನಗಳಿಂದ ಬಹಳಷ್ಟು ಅನಾನುಕೂಲವಾಗಿದೆ. ಸನ್ನದುದಾರರ ಹಿತದೃಷ್ಟಿಯಿಂದ ಏಪ್ರಿಲ್ ತಿಂಗಳಾಂತ್ಯದವರೆಗೆ ಹೊಸ ಮತ್ತು ಹಳೇ ಪದ್ಧತಿಯಲ್ಲಿ ಮದ್ಯ ಖರೀದಿಸಲು ಅನುಕೂಲ ಮಾಡಿಕೊಡುವಂತೆ ಎಂದು ಕುಂದಾಪುರ ತಾಲೂಕು ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ವೈ. ಕರುಣಾಕರ್ ಶೆಟ್ಟಿ, ಉಡುಪಿ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಸಂಚಾಲಕ ಡೇರಿಕ್ ಆಗ್ರಹಿಸಿದರು.

ವೈನ್ ಮರ್ಚಂಟ್ಸ್ ಅಸೋಸಿಯೇಶನ್ ವತಿಯಿಂದ ಡಿಪೋ ಮ್ಯಾನೇಜರ್ ಎಸ್. ಎಸ್ ಕಟ್ಟಿಮನೆ ಅವರಿಗೆ ಮನವಿ ಸಲ್ಲಿಸಲಾಯಿತು.

Comments are closed.