ಕರಾವಳಿ

ಕುಂದಾಪುರದ ಆಜ್ರಿ ಚೋನಮನೆ ಶನಿ ದೇವರ ದೇವಸ್ಥಾನದಲ್ಲಿ‌ ಜಾತ್ರೋತ್ಸವ, ಕೆಂಡ ಸೇವೆ (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕುಂದಾಪುರ ತಾಲೂಕಿನ ಆಜ್ರಿ ಚೋನಮನೆ ಶನಿ ದೇವರ ದೇವಸ್ಥಾನದಲ್ಲಿ‌ ಜಾತ್ರೋತ್ಸವ ಕೆಂಡ ಸೇವೆ ಶನಿವಾರ ರಾತ್ರಿ ಸಂಭ್ರಮದಿಂದ ಜರುಗಿತು.

ಅಪಾರ ಭಕ್ತರನ್ನು ಹೊಂದಿರುವ ಆಜ್ರಿ ಚೋನಮನೆ ಶನೀಶ್ವರ ದೇವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ ಕೆಂಡ ಸೇವೆ ಹಿನ್ನೆಲೆ ಸಂಜೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು‌ ನಡೆದವು. ಬಳಿಕ ದೇವರ ದರ್ಶನ ನಂತರ ಕೆಂಡ ಸೇವೆ ಜರುಗಿದ್ದು ಜಿಲ್ಲೆ ಹಾಗೂ ಹೊರ ಜಿಲ್ಲೆಯ ಸಾವಿರಾರು ಮಂದಿ ಭಕ್ತರು ಪಾಲ್ಘೊಂಡರು. ದೇವಸ್ಥಾನದ ಆಡಳಿತ ಧರ್ಮದರ್ಶಿ ಚೋನಮನೆ ಅಶೋಕ್ ಶೆಟ್ಟಿ ಅವರು ತಲೆ ಮೇಲೆ ದೇವರನ್ನು ಹೊತ್ತು ಮೊಳೆಯ ಪಾದುಕೆ ಧರಿಸಿ ದೇವಸ್ಥಾನಕ್ಕೆ ಒಂಬತ್ತು‌ ಸುತ್ತು ಬರುವಾಗ ನೆರೆದ ಭಕ್ತರು ಭಕ್ತಿ ಪರವಶರಾದರು. ರಾತ್ರಿ ಯಕ್ಷಗಾನ ಸೇವೆ, ಅನ್ನಸಂತರ್ಪಣೆ ಜರುಗಿತು.

ಜಾತ್ರೆಯಲ್ಲಿ ಅನ್ಯಮತೀಯ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದೆಂಬ ಮನವಿ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Comments are closed.