(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕುಂದಾಪುರ ತಾಲೂಕಿನ ಮೊಳಹಳ್ಳಿ ಮೂಲದ ಯಶಸ್ವಿ ಉದ್ಯಮಿಗಳಾದ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ ಮತ್ತು ಶಶಿ ಹೆಗ್ಡೆ ದಂಪತಿ ಹಾಗೂ ಲೈಫ್ಲೈನ್ ಫೀಡ್ಸ್ ಇಂಡಿಯಾ ಪೈ. ಲಿ.ಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೈಲ್ಕೆರೆ ಕಿಶೋರ್ ಕುಮಾರ್ ಹೆಗ್ಡೆ ಮತ್ತು ಸುರೇಖಾ ಹೆಗ್ಡೆ ದಂಪತಿಗಳಿಗೆ ಹುಟ್ಟೂರ ಸನ್ಮಾನ ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ. ಎಂ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ಭಾನುವಾರ ಮೊಳಹಳ್ಳಿಯ ಮಲ್ನಾಡ್ ಟೈಲ್ಸ್ ಆವರಣದಲ್ಲಿ ನಡೆಯಿತು.
ಮೂಡಬಿದಿರೆಯ ಆಳ್ವಾಸ್ ಎಜುಕೇಶನ್
ಫೌಂಡೇಶನ್ನ ಪ್ರವರ್ತಕ ಡಾ. ಎಂ. ಮೋಹನ ಆಳ್ವ ಸನ್ಮಾನಿತರನ್ನು ಗೌರವಿಸಿ ಮಾತನಾಡಿ, ಯಾರೂ ತುಳಿಯದ ಮತ್ತು ಯಾರೂ ತಿಳಿಯದ ದಾರಿಯನ್ನು ಅರಿತು ಪರಿಶ್ರಮದ ಮೂಲಕ ಮೇಲೆದ್ದು ಬರುವವನೇ ನಿಜವಾದ ಸಾಹಸಿ. ಈ ನಿಟ್ಟಿನಲ್ಲಿ ಈ ಇಬ್ಬರು ಭಗೀರಥ ಸಾಹಸಿಗಳು. ಇವತ್ತಿನ ದಿನಗಳಲ್ಲಿ ಎಲ್ಲಾ ಸಮುದಾಯದಲ್ಲೂ ಸಾಧಕರು ಇದ್ದಾರೆ. ಈ ಸಾಧಕರನ್ನು ಹುಟ್ಟೂರಿನಲ್ಲಿ ಗುರುತಿಸಿ ಗೌರವಿಸುವುದರಿಂದ ಯುವ ಸಮುದಾಯಕ್ಕೆ ಪ್ರೇರಣೆಯಾಗಲಿದೆ ಎಂದರು.
ಮಂಗಳೂರಿನ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ. ಬಾಲಕೃಷ್ಣ ಶೆಟ್ಟಿ ಅಭಿನಂದನ ಭಾಷಣ ಮಾಡಿದರು.
ಈ ವೇಳೆ ಎಂ.ಎಂ. ಚಾರಿಟೆಬಲ್ ಫೌಂಡೇಶನ್ ಮೊಳಹಳ್ಳಿಯ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ, ಮೊಳಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷೆ ಇಂದಿರಾ ಯು. ಶೆಟ್ಟಿ, ಸಮ್ಮಾನ ಸಮಿತಿಯ ಗೌರವಾಧ್ಯಕ್ಷ ಹೆಚ್. ಜಯಶೀಲ ಶೆಟ್ಟಿ, ಅಧ್ಯಕ್ಷ ಎಂ. ದಿನೇಶ್ ಹೆಗ್ಡೆ, ಕೋಶಾಧಿಕಾರಿ ಕಿಶೋರ್ ಶೆಟ್ಟಿ, ಕಾರ್ಯದರ್ಶಿ ಶಾಂತಾರಾಮ ಶೆಟ್ಟಿ ಉಪಸ್ಥಿತರಿದ್ದರು.
ಸನ್ಮಾನ ಸಮಿತಿಯ ಅಧ್ಯಕ್ಷ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ ಸ್ವಾಗತಿಸಿದರು. ಕಾರ್ಯದರ್ಶಿ ಶಾಂತಾರಾಮ ಶೆಟ್ಟಿ ವಂದಿಸಿದರು. ನಿವೃತ್ತ ಪ್ರಾಂಶುಪಾಲ ಡಾ. ದಿನೇಶ್ ಹೆಗ್ಡೆ ಬಡಾಮನೆ ಪ್ರಸ್ತಾವನೆಗೈದರು. ಅಕ್ಷಯ ಹೆಗ್ಡೆ ಮೊಳಹಳ್ಳಿ, ರಾಜಶೇಖರ್ ಶೆಟ್ಟಿ ನಿರೂಪಿಸಿದರು.
Comments are closed.