ಕುಂದಾಪುರ: ಗಂಗೊಳ್ಳಿಯಲ್ಲಿ ಗೋ ಹತ್ಯೆ ವಿಚಾರವಾಗಿ ಆರಂಭವಾದ ಬೃಹತ್ ಹೋರಾಟದಿಂದ ಹಿಂದುಗಳ ವಿರುದ್ಧ ಅನ್ಯ ಧರ್ಮಿಯರು ವ್ಯಾಪಾರ ನಿರ್ಬಂಧಿಸಿದ್ದರಿಂದ ಶುರುವಾದ ಬೆಳವಣಿಗೆಗಳು ರಾಜ್ಯಾಧ್ಯಂತ ಅನೇಕ ಬದಲಾವಣೆಗೆ ಕಾರಣವಾಗಿದೆ. ಇದರಿಂದ ಇಡೀ ರಾಜ್ಯದಲ್ಲಿ ಹಿಂದು ಸಮಾಜ ಜಾಗೃತವಾಯಿತು. ಹಿಂದು ಸಮಾಜ ಇನ್ನಷ್ಟು ಜಾಗೃತಗೊಂಡರೆ, ಯಾವ ದುಷ್ಟ ಶಕ್ತಿ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಅವರು ಶುಕ್ರವಾರ ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಇಲ್ಲಿನ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ಆಯೋಜಿಸಿದ 505 ಕಲಶಗಳ ಸಾಮೂಹಿಕ
ಸತ್ಯನಾರಾಯಣ ಪೂಜೆ ಅಂಗವಾಗಿ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಯಿಂದ ಇದು ನಡೆದಿಲ್ಲ.ಸರಕಾರ ಹಾಗೂ ರಾಜಕೀಯ ವ್ಯವಸ್ಥೆಯಿಂದ ನನ್ನ ನಿರ್ಬಂಧಿಸಿದ್ದರಿಂದ ನೇರವಾಗಿ ಭಾಗವಹಿಸಲು ಸಾಧ್ಯವಾಗಿಲ್ಲ. ಶ್ರೀಸತ್ಯನಾರಾಯಣ ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ. ಸರಕಾರ ನಿರ್ಬಂಧಿಸಿರುವುದು ದುರ್ದೈವದ ಸಂಗತಿ. ಇದರಿಂದ ನೋವಾಗಿದೆ. ಹಾಗಾದರೆ ನಿಮಗೆ ಹಿಂದುತ್ವ, ಹಿಂದು ಧರ್ಮದ ಉನ್ನತಿ, ಸಂಸ್ಕೃತಿಯ ರಕ್ಷಣೆ, ಹಿಂದು ಧರ್ಮ ಜಾಗೃತಿ ಬೇಡವಾ? ಹಿಂದೂ ಸಮಾಜದ ಹಿತದೃಷ್ಟಿಯಿಂದ ಬಗ್ಗೆ 24 ಗಂಟೆಯಚಿಂತನೆ ಮಾಡುತ್ತಿರುವ ಹಿಂದುತ್ವದ ವಿಚಾರಧಾರೆಯನ್ನು ತಡೆಯುತ್ತಿದ್ದೀರಿ. ಅನೇಕ ವರ್ಷಗಳ ಹಿಂದು ಸಮಾಜದ ಜಾಗೃತಿಗಾಗಿನ ಹೋರಾಟದಲ್ಲಿ, ಹಿಂದುತ್ವದ ವಿಚಾರದಲ್ಲಿ ಒಂದಿಂಚು ಹಿಂದೆ ಸರಿದಿಲ್ಲ. ನಾನು ಯಾರಿಗೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದವರು ಆಕ್ರೋಶದಿಂದ ನುಡಿದರು.
ಹಂಗಾರಕಟ್ಟೆ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದಲ್ಲಿ ಅಶಾಂತಿ ಕೆಡಿಸುವಂತಹ ಅನೇಕ ಘಟನೆಗಳು ನಡೆಯುತ್ತಿದ್ದು, ಹಿಂದು ಸಮಾಜ ಇದರಿಂದ ಜಾಗೃತಗೊಳ್ಳಬೇಕು. ಮಾನವೀಯತೆ ಎನ್ನುವುದು ಹಿಂದುಗಳಿಗೆ ಮಾತ್ರ ಮೀಸಲು ಅನ್ನುವಂತಾಗಿದೆ. ನಾವು 7ರಾಜ್ಯಗಳಲ್ಲಿ ಅಲ್ಪ ಸಂಖ್ಯಾಕರಾಗಿದ್ದೇವೆ ಅನ್ನುವುದನ್ನು ಗಂಭೀರವಾಗಿ ಚಿಂತಿಸಬೇಕಿದೆ. ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಯಾವತ್ತೋ ಈ ವಿಚಾರ ಆಗಬೇಕಿತ್ತು. ನಾವು ಜಾಗೃತವಾದರೆ ಮಾತ್ರ
ಧರ್ಮ ಉಳಿಯವುದು ಎನ್ನುವುದಾಗಿ ಹಿಂದು ಜಾಗರಣ ವೇದಿಕೆ ದಕ್ಷಿಣ ಕರ್ನಾಟಕ ಪ್ರಾಂತೀ ಕಾರ್‍ಯಕಾರಣಿ ಸದಸ್ಯ ರಾಧಕೃಷ್ಣ ಅಡ್ಯಂತ್ಯಾಯ ದಿಕ್ಸೂಚಿ ಭಾಷಣ ಮಾಡಿದರು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದದ ಮ್ಯಾನೇಜಿಂಗ್ ಟ್ರಸ್ಟಿ ಡಾ. ಗೋವಿಂದ ಬಾಬು
ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ನಾಯಕವಾಡಿ ಶ್ರೀ
ಸಂಗಮೇಶ್ವರ ದೇಗುಲದ ಕಾರ್‍ಯದರ್ಶಿ ಜಿ. ಸುಬ್ಬ, ಖಾರ್ವಿಕೇರಿ ಶ್ರೀ ಮಹಾಂಕಾಳಿ
ದೇಗುಲದ ಪಾತ್ರಿ ನಾಗರಾಜ ಖಾರ್ವಿ,
ಕೋಟಿ ಚೆನ್ನಯ್ಯ,ಗರಡಿಯ ಪಾತ್ರಿ ರಾಘವೇಂದ್ರ ಪೂಜಾರಿ, ಹಿಂದು ಜಾಗರಣ ವೇದಿಕೆ ಉಡುಪಿ ಅಧ್ಯಕ್ಷ ಪ್ರಶಾಂತ್ ನಾಯಕ್ ಉಪಸ್ಥಿತರಿದ್ದರು.
ಹಿಂಜಾವೇ ಗಂಗೊಳ್ಳಿಯ ಅಧ್ಯಕ್ಷ ಗೋವಿಂದರಾಯ ಶೇರುಗಾರ್ ಸ್ವಾಗತಿಸಿ, ಪ್ರಧಾನ ಕಾರ್‍ಯದರ್ಶಿ ಯಶವಂತ್ ಗಂಗೊಳ್ಳಿ ಪ್ರಸ್ತಾವಿಸಿದರು. ಸುಂದರ ಗಂಗೊಳ್ಳಿ ಕಾರ್‍ಯಕ್ರಮ ನಿರೂಪಿಸಿದರು.
ಬಿಜೆಪಿ, ಕೆಲ ಜನಪ್ರತಿನಿಧಿಗಳಿಗೆ ಧಿಕ್ಕಾರ..
ಸಭಾ ಕಾರ್‍ಯಕ್ರಮಕ್ಕೂ ಮೊದಲು ಗಂಗೊಳ್ಳಿ ರಾಮಮಂದಿರದಿಂದ ವಿರೇಶ್ವರ ದೇವಸ್ಥಾನದವರೆಗೆ ಬೃಹತ್ ಶೋಭಾಯಾತ್ರೆ ನಡೆಯಿತು. ಕಾರ್‍ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಇದೇವೇಳೆ ಮುತಾಲಿಕ್ ಅವರಿಗೆ ನಿರ್ಬಂಧ ಹೇರಿದ ಬಗ್ಗೆ ಬಿಜೆಪಿ ಸರಕಾರ ಹಾಗೂ ಕೆಲವು ಜನರಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಷ ವ್ಯಕ್ತಪಡಿಸಲಾಯಿತು.
Comments are closed.