ಕರಾವಳಿ

ಮುತಾಲಿಕ್ ಗಂಗೊಳ್ಳಿಗೆ ಬರಲು ಅಡ್ಡಿಪಡಿಸಿದ ಕಾಣದ ಕೈಗಳ ವಿರುದ್ಧ ಕೊರಗಜ್ಜನ ಮೊರೆ ಹೋದ ಹಿಂದು ಕಾರ್ಯಕರ್ತರು! (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕಳೆದ ವಾರ ಗಂಗೊಳ್ಳಿ ವೀರೇಶ್ವರ ದೇವಸ್ಥಾನದಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಕಾಣದ ಕೈಗಳ ವಿರುದ್ಧ ಗಂಗೊಳ್ಳಿಯ ಹಿಂದೂ ಸಂಘಟನೆ ಕಾರ್ಯಕರ್ತರು ಕೊರಗಜ್ಜನ ಮೊರೆಹೋಗಿ ನ್ಯಾಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಗಂಗೊಳ್ಳಿ ಜಾಗೃತ ಹಿಂದು ಕಾರ್ಯಕರ್ತರು ಬುಧವಾರ ಮುಂಜಾನೆ ಗಂಗೊಳ್ಳಿ ವೀರೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ 7 ಕಿ.ಮೀ ಪಾದಯಾತ್ರೆ ಮೂಲಕ ಸಾಗಿ ಮುಳ್ಳಿಕಟ್ಟೆ ಕೊರಗಜ್ಜನ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಇತ್ತೀಚೆಗೆ ನಡೆದ ಗಂಗೊಳ್ಳಿಯಲ್ಲಿ ಹಿಂದೂ‌ ಜಾಗರಣ ವೇದಿಕೆ ವತಿಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮ‌ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭಾಗವಹಿಬೇಕಾಗಿದ್ದು ಕಾರ್ಯಕ್ರಮಕ್ಕೆ ಅನುಮತಿ ಸಿಕ್ಕಿದ್ದರು ಕೆಲವು ಕಾಣದ ರಾಜಕೀಯ ವ್ಯವಸ್ಥೆಗಳಿಂದ ಕೊನೆ ಕ್ಷಣದಲ್ಲಿ ಪ್ರಮೋದ್ ಮುತಾಲಿಕ್ ಉಡುಪಿ ಜಿಲ್ಲೆಗೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಕಾರ್ಯಕ್ರಮ ಅಸ್ತವ್ಯಸ್ತ ಆಗುವಂತೆ ಮಾಡಿದ ಕಾಣದ ಕೈಗಳ ವಿರುದ್ಧ ನ್ಯಾಯಕ್ಕಾಗಿ ಇಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ.

Comments are closed.