(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕುಂದಾಪುರದ ಶ್ರೀ ಕುಂದೇಶ್ವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಹಿಂದೂ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಸಲುವಾಗಿ ಮಹಾರುದ್ರ ಯಾಗ ಹಮ್ಮಿಕೊಳ್ಳಲಾಗಿದ್ದು ವೈದಿಕರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದೆ. ಶುಕ್ರವಾರದಿಂದ ಮಹಾರುದ್ರ ಯಾಗದ ಹಿನ್ನೆಲೆ ಪೂಜಾ ಕೈಂಕರ್ಯಗಳು ನಡೆಯುತ್ತಿದೆ.
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ, ತಂತ್ರಿಗಳಾದ ಪ್ರಸನ್ನಕುಮಾರ್ ಐತಾಳ್, ಸ್ವಾಗತ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕಲ್ಪತರು, ಕಾರ್ಯದರ್ಶಿ ಸುಬ್ರಮಣ್ಯ ಹೊಳ್ಳ, ವ್ಯವಸ್ಥಾಪನಸಮಿತಿ ಸದಸ್ಯರಾದ ಸತೀಶ್ ಶೆಟ್ಟಿ, ವಿಶ್ವನಾಥ ಪೂಜಾರಿ, ನಾಗರಾಜ ರಾಯಪ್ಪನಮಠ, ಜಯಾನಂದ ಖಾರ್ವಿ, ಸತೀಶ್, ವೀಣಾ ಎಚ್. ಸವಿತಾ ಜಗದೀಶ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ನಿತ್ಯ ಕಾರ್ಯಕ್ರಮಗಳ ವಿವರ:
ಶುಕ್ರವಾರ ಸಂಜೆ ಗಂಟೆ 6-00ರಿಂದ ಮಂಟಪ ಸಂಸ್ಕಾರ, ರಾಠೋಘ್ನ ಹೋಮ, ವಾಸ್ತು ಪೂಜೆ ನಡೆಯಿತು.
ಏ.30 ಶನಿವಾರ ಬೆಳಿಗ್ಗೆ 7.00 ಗಂಟೆಯಿಂದ ಗಣಪತಿ ಪೂಜೆ, ಪುಣ್ಯಾಹ ನಾಂದಿ, ಋತ್ವಿಕ್ಟರಣೆ, ರುದ್ರ ಕಲಶ ಸ್ಥಾಪನೆ, ಗಣಹೋಮ (12 ಕಾಯಿ) ರುದ್ರ ಪುರಶ್ಚರಣೆ ಪ್ರಾರಂಭ, ದೇವರಿಗೆ ಕಲಶಾಭಿಷೇಕ,ಮಹಾಮಂಗಳಾರತಿ ಅನ್ನಸಂತರ್ಪಣೆ ಜರುಗಿತು. ಸಂಜೆ 6.00 ಗಂಟೆಯಿಂದ ರುದ್ರಕ್ರಮಾರ್ಚನೆ ಮತ್ತು ಅಷ್ಟಾವಧಾನ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಂತರ ಸೂರ್ಯೋದಯ ತನಕ ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದಿಂದ ಭಜನೆ
ಮೇ.1 ರವಿವಾರ ಬೆಳಿಗ್ಗೆ 7.00 ಗಂಟೆಯಿಂದ ಪುಣ್ಯಾಹ ನವಗ್ರಹ ಹೋಮ, ರುದ್ರ ಪುರಶ್ಚರಣೆ, ನಂತರ ದೇವರಿಗೆ ಕಲಶಾಭಿಷೇಕ, ಮಹಾಮಂಗಳಾರತಿ, ಅನ್ನಸಂತರ್ಪಣೆ
ಸಂಜೆ 6.00 ಗಂಟೆಯಿಂದ ಅಗ್ನಿ ಜನನ, ರುದ್ರಕ್ರಮಾರ್ಚನೆ ಮತ್ತು ಅಷ್ಟಾವಧಾನ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಂತರ ಸೂರ್ಯೋದಯದ ತನಕ ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದಿಂದ ಭಜನೆ
ಮೇ.2ಸೋಮವಾರ ಬೆಳಿಗ್ಗೆ 7.00 ಗಂಟೆಯಿಂದ ಮಹಾ ರುದ್ರ ಯಾಗ ಪ್ರಾರಂಭ, ಮಂಗಳಾರತಿ, ಪೂರ್ಣಾಹುತಿ, ದೇವರಿಗೆ ಕಲಶಾಭಿಷೇಕ, ಮಹಾ ಅನ್ನಸಂತರ್ಪಣೆ, ಮಂತ್ರಾಕ್ಷತೆ. ಸಂಜೆ 6.00 ಗಂಟೆಯಿಂದ ರಂಗಪೂಜೆ, ಉತ್ಸವ ಮತ್ತು ಅಷ್ಟಾವಧಾನ ಸಂಜೆ ಗಂಟೆ 7.00ರಿಂದ ರಥದಲ್ಲಿ ಶ್ರೀ ದೇವರ ಪುರ ಮೆರವಣಿಗೆ ಸಂಜೆ ಮಹಾಮಂಗಳಾರತಿ. ಸಂಜೆ 7.00 ಗಂಟೆಯಿಂದ ಕುಂದಾಪುರ ಯ ಕುಂದಾಪುರ ಯುವಜನಸಭಾ ಮತ್ತು ಶ್ರೀ ಕುಂದೇಶ್ವರ ಗಣೇಶೋತ್ಸವ ಸಮಿತಿ ಇವರ ಪ್ರಾಯೋಜಕತ್ವದಲ್ಲಿ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ 200 ಶಿವಗಾನಾಮೃತ ಭಕ್ತಿಗೀತೆ-ಭಾವಗೀತೆ, ಜನಪದ ಗೀತೆ ದಾಸರಪದಗಳ ಸಂಗೀತ ಕಾರ್ಯಕ್ರಮ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿ ಮಠದ ಹತ್ತಿರ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Comments are closed.