ಕರಾವಳಿ

ಕುಟುಂಬ, ರಾಷ್ಟ್ರ ರಕ್ಷಣೆ ಹಿತದೃಷ್ಟಿಯಿಂದ ಅನ್ಯಮತೀಯರ ಅಂಗಡಿ ಕೆಲಸಕ್ಕೆ ಹಿಂದೂ ಯುವತಿಯರು ಹೋಗದಿರಿ: ಪ್ರೇಮಾನಂದ ಶೆಟ್ಟಿ ಕಟ್ಕೆರೆ (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಜೀವನೋಪಾಯಕ್ಕಾಗಿ ಅನ್ಯಕೋಮಿನವರ ಅಂಗಡಿಗೆ‌ ಹಿಂದೂ‌ ಹೆಣ್ಣುಮಕ್ಕಳನ್ನು ಕೆಲಸಕ್ಕೆ ಕಳಿಸುವುದನ್ನು ಮೊದಲಾಗಿ ಅವರ ಪಾಲಕರು ನಿಲ್ಲಿಸಬೇಕು. ನಾವು ಅನ್ಯಕೋಮಿನವರಿಗೆ ಹೇಳುವ ಹಕ್ಕಿಲ್ಲ.‌ ಹಿಂದೂ ಸಂಘಟನೆ ಸಹಿತ ಹಲವಾರು ಕೆಲಸ ಕಾರ್ಯಗಳು ಭೂಮಿಯಲ್ಲಿ ಬಹಳಷ್ಟು ಇದೆ. ಕುಟುಂಬದ ಗೌರವ ಹಾಗೂ ರಾಷ್ಟ್ರದ ರಕ್ಷಣೆ ಹಿತದೃಷ್ಟಿಯಿಂದ ನಿಮ್ಮ‌ ಮನೆ ಹೆಣ್ಮಕ್ಕಳನ್ನು ಹಿಂದೂ ಪಾಲಕರು ಅವರ ಅಂಗಡಿಗಳಿಗೆ ಕಳಿಸಬೇಡಿ. ಯುವತಿಯರು ಕೂಡ ತಮ್ಮ ಕುಟುಂಬದ ನಾಶವಾಗಬಾರದು ಎಂದಾದರೆ ಅನ್ಯಕೋಮಿನವರ ಸಹವಾಸ ಮಾಡಬೇಡಿ ಎಂದು ವಿಶ್ವ ಹಿಂದೂ ಪರಿಷತ್ ಮಠಮಂದಿರ್ ಪ್ರಮುಖ್ ಪ್ರೇಮಾನಂದ ಶೆಟ್ಟಿ ಕಟ್ಕೆರೆ ಮನವಿ ಮಾಡಿದ್ದಾರೆ.

ಕುಂದಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಪ್ಪಿನಕುದ್ರು ಶಿಲ್ಪಾ ದೇವಾಡಿಗ ಅವರದ್ದು ವ್ಯವಸ್ಥಿತವಾದ ಕೊಲೆ ಎನ್ನುವುದು ವೈಯಕ್ತಿಕ ಅಭಿಪ್ರಾಯ. ಇಡೀ ದೇಶವನ್ನು ಇಸ್ಲಾಂಮೀಕರಣ ಮಾಡುವ ಅಜೇಂಡಾ ಇಟ್ಟುಕೊಂಡು ತೆರೆಮರೆಯ ಕೆಲಸ ಮಾಡಲಾಗುತ್ತಿದೆ. ಕರಾವಳಿಯ ಬೈಂದೂರು, ಕುಂದಾಪುರದಲ್ಲಿ ಶಿಲ್ಪಾರಂತಹ ಯುವತಿ ಬಲಿಪಶುವಾದ ಪ್ರಕರಣ ತೆರೆಮರೆಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದು ಮುಂದೊಂದು ದಿನ ಅವರ ಸಾಮರ್ಥ್ಯ ಪ್ರಕಟಿಸುವ ಶಕ್ತಿ ಕಾಯುತ್ತಿದ್ದಾರೆ. ಹಿಂದೂಗಳ ಸಂಖ್ಯೆ ಕಡಿಮೆ ಮಾಡುವಲ್ಲಿ ಸುಳ್ಳು, ನಾಟಕೀಯ ಭರವಸೆ ಮೂಲಕ ಅವರನ್ನು ಪ್ರೀತಿಸಿ, ಮತಾಂತರ ಮಾಡುವ, ಕೊಲ್ಲುವ ಅಥವಾ ಆತ್ಮಹತ್ಯೆಗೆ ಪ್ರೇರೇಪಿಸುವ ಕೆಲಸವಾಗುತ್ತಿದ್ದು ಶಿಲ್ಪಾ ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸದೇ ಇಬ್ಬರು ದಂಪತಿಗಳಿಂದಾದ ಹತ್ಯೆ ಎಂಬುದಾಗಿ ಪರಿಗಣಿಸಿ ತನಿಖೆ ಮಾಡುವ ಮೂಲಕ ಅವರಿಗೆ ಕಠಿಣ ಶಿಕ್ಷೆ ನೀಡುವ ಕೆಲಸವಾಗಬೇಕು. ಗುಪ್ತಚರ ವಿಭಾಗದ ಮೂಲಕ ಜಿಲ್ಲೆಯಲ್ಲಿ ನಡೆಯುತ್ತಿರುವ ಇಂತಹ ಲವ್ ಜಿಹಾದ್ ದುಷ್ಕ್ರತ್ಯಗಳ ಮಾಹಿತಿ ಪಡೆದು ಸರಕಾರ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.

ಮನೆಯಲ್ಲಿ ಟಿವಿ, ಧಾರಾವಾಹಿ ಮೊದಲಾದವುಗಳನ್ನು ಅಗತ್ಯಕ್ಕೂ ಜಾಸ್ಥಿಯಾಗಿ ನೆಚ್ಚಿಕೊಂಡಿರುವುದು ಹಾಗೂ ಸರಕಾರಿ ಶಿಕ್ಷಣ ಪದ್ಧತಿಯಲ್ಲಿ ಮೆಕಾಲೆ ಶಿಕ್ಷಣ ಪದ್ದತಿ ನೀಡುತ್ತಿರುವುದರಿಂದ ಹಿಂದೂಗಳ ಮನೆಯಲ್ಲಿ ಧರ್ಮ ಪ್ರಜ್ಞೆ ಇಲ್ಲದಂತಾಗಿದ್ದು ಇದರಿಂದ ಕೆಲವು ಯುವತಿಯರು ಅನ್ಯಕೋಮಿನವರ ಅಂಗಡಿಗಳಿಗೆ ಹೋಗುವುದು, ಅವರ ಸ್ನೇಹ ಮಾಡಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿಶ್ವಹಿಂದೂ ಪರಿಷತ್ 1964 ರಿಂದ ಹಿಂದೂ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ. ಆದರೂ ಕೂಡ ಇಂತಹ ಘಟನೆ ಆಗುತ್ತಿದೆ ಎಂದಾರೆ ಅನ್ಯಕೋಮಿನವರ ಅಜೆಂಡಾ ಬಹಳಿಷ್ಟಿದೆ ಎಂಬುದನ್ನು ಅರಿಯಬೇಕು. ಧಾರ್ಮಿಕ ಶಿಕ್ಷಣ, ಶಿಕ್ಷಣ ಪದ್ದತಿಯಲ್ಲಿ ಬದಲಾವಣೆ ಆಗದಿದ್ದರೆ ಹಿಂದೂ ಸಮಾಜ ನಾಶಕ್ಕೆ ಹೋಗಲಿದೆ ಎಂದರು.

ಮೊದಲು ಲವ್ ಜಿಹಾದ್ ಶಬ್ದವನ್ನು ಸಮಾಜ, ಸರಕಾರ, ಪೊಲೀಸ್ ಇಲಾಖೆ ನಂಬುತ್ತಿರಲಿಲ್ಲ. ಆದರೆ ಕೇರಳ ಹೈಕೋರ್ಟ್ ಇದನ್ನು ಹೇಳಿದ ಮೇಲೆ‌ ಲವ್ ಜಿಹಾದ್ ಶಬ್ದ ಎಲ್ಲರ ತಲೆಯಲ್ಲಿದೆ.‌ ಮನೆಯಲ್ಲಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ, ಮನೆಯಲ್ಲಿ ಒಟ್ಟಾಗಿ ಬೆರೆಯುವ ಕುಟುಂಬದ ವಾತಾವರಣ ನಿರ್ಮಾಣ, ಸೀರಿಯಲ್ ದೂರವಿಟ್ಟು ಮಾನವ ಕುಲ ಅಭಿವೃದ್ಧಿಯ ಆತ್ಮೋನ್ನತಿಯ ದಿನಚರಿ ಆಚರಣೆ ಸಂಕಲ್ಪದೊಂದಿಗೆ ಸಾಗಬೇಕು ಎಂದರು.

Comments are closed.